ಅಬ್ದುಲ್ ಹಕ್

Update: 2022-10-13 10:26 GMT

ಕಾಪು, ಅ.13: ಮಲ್ಲಾರು ಗ್ರಾಮದ ಅಬ್ದುಲ್ ಹಕ್ ಸಾಹೇಬ್ (95) ವಯೋ ಸಹಜತೆಯಿಂದ ಅ.12ರಂದು ಸ್ವಗೃಹದಲ್ಲಿ ನಿಧನರಾದರು.

1947ರಲ್ಲಿ ಸರ್ವೆ ಇಲಾಖೆಯಲ್ಲಿ ಸರ್ವೇಯರಾಗಿ ಆಗಿನ ಮದ್ರಾಸ್ ಸರಕಾರದಲ್ಲಿ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಎಡಿಎಲ್‌ಆರ್ ಸಹಾಯಕ ಭೂದಾಖಲೆಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಮೃತರನ್ನು ಐವರು ಪುತ್ರರು, ಐವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ