ಗುಜರಾತ್‌: ತೂಗು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

Update: 2022-10-31 09:50 GMT

ಅಹಮದಾಬಾದ್: ಬ್ರಿಟಿಷರ ಕಾಲದ ಸೇತುವೆ ರವಿವಾರ ಸಂಜೆ ಕುಸಿದು ಬಿದ್ದು ಕನಿಷ್ಠ 141 ಜನರು ಸಾವನ್ನಪ್ಪಿದ ಮೊರ್ಬಿ ನಗರಕ್ಕೆ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನಾಳೆ ಭೇಟಿ ನೀಡಲಿದ್ದಾರೆ.

ಮಹಿಳೆಯರು ಹಾಗೂ  ಮಕ್ಕಳು ಸೇರಿದಂತೆ ಸುಮಾರು 500 ಜನರು ತೂಗು ಸೇತುವೆಯ ಮೇಲೆ ಇದ್ದಾಗ ಸೇತುವೆಯ ಕೇಬಲ್‌ಗಳು ಛಿದ್ರವಾಗಿದ್ದು, ಜನರು ಕೆಳಗಿನ ನದಿಗೆ ಬಿದ್ದಿದ್ದರು. ಮೊರ್ಬಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಸೇತುವೆಯ ಮೇಲೆ ಹಲವರು ಛತ್ ಪೂಜೆ ವಿಧಿವಿಧಾನಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.

 ಇಂದು ಬೆಳಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‌ನ ಕೆವಾಡಿಯಾದಲ್ಲಿ ಏಕತಾ ಪ್ರತಿಮೆಯ ಬಳಿ  ಜನರನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು  ರಾಜ್ಯಕ್ಕೆ ಕೇಂದ್ರವು ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದರು

Similar News