ಸಚಿವ ಶ್ರೀರಾಮುಲು ಧರಣಿ ನಡೆಸಿದ್ದು ಪ್ರಧಾನಿ ವಿರುದ್ಧವೇ?: ಕಾಂಗ್ರೆಸ್ ಪ್ರಶ್ನೆ

Update: 2022-11-02 07:09 GMT

ಬೆಂಗಳೂರು: 'ಸಾರಿಗೆ ಸಚಿವ ಬಿ. ಶ್ರೀ ರಾಮುಲು ಅವರಿಗೆ ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಬಳ್ಳಾರಿಯ ವೇದಾವತಿ ನದಿ ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ಥಿಗಾಗಿ ಒತ್ತಾಯಿಸಿ ಸಚಿವ ಶ್ರೀರಾಮುಲು ಅವರು ರಾತ್ರಿಯಡೀ ಧರಣಿ ನಡೆಸಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

''ತಾವು ಧರಣಿ ನಡೆಸಿದ್ದು ಯಾರ ವಿರುದ್ಧ? ನಿಮ್ಮದೇ ಸರ್ಕಾರದ ವಿರುದ್ಧವೇ? ನಿಮ್ಮದೇ ಸಿಎಂ ವಿರುದ್ಧವೇ? ನಿಮ್ಮದೇ ಪ್ರಧಾನಿ ವಿರುದ್ಧವೇ? ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ತಮ್ಮ ಮಾತನ್ನು ಯಾರೂ ಕೇಳ್ತಿಲ್ಲವೇ? ಅಥವಾ ಇದು ಕೇವಲ ತಳ್ಳುವ ಸರ್ಕಾರವೇ?'' ಎಂದು ಕಾಂಗ್ರೆಸ್ ಟೀಕಿಸಿದೆ. 

ಕಾಲುವೆಯ ಪಿಲ್ಲರ್‌ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ರಾಮುಲು ಅವರು ಧರಣಿ ನಡೆಸಿದ್ದರು. 

Similar News