ಕೊಲ್ಲೂರು ಮೂಕಾಂಬಿಕೆ ‘ಸಲಾಂ ಮಂಗಳಾರತಿ’ಯ ಹೆಸರು ಬದಲಾವಣೆಗೆ ಸರ್ಕಾರ ನಿರ್ಧಾರ?

Update: 2022-11-02 17:21 GMT

ಬೆಂಗಲೂರು: ಸಂಘ ಪರಿವಾರದ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ನೆನಪಿನಲ್ಲಿ ನಡೆಯುತ್ತಿದ್ದ ‘ಸಲಾಂ ಮಂಗಳಾರತಿ ಪೂಜೆ’ಯ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ವಿಕಾಸಸೌಧದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಪಾಲ್ಗೊಂಡಿದ್ದು, ಸಮಾಲೋಚನೆ ನಡೆಸಲಾಗಿದೆ.  

ಸಲಾಂ ಆರತಿ ಬದಲಿಗೆ ‘ದೀವಟಿಗೆ ಮಂಗಳಾರತಿ ಪೂಜೆ’ ಎಂದು ಮರುನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಿದ್ದು, ಈ ಸಂಬಂಧ ಒಂದೆರಡು ದಿನಗಳಲ್ಲಿ ಸರಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಏನಿದು ಕೊಲ್ಲೂರು ದೇವಸ್ಥಾನದ ‘ಸಲಾಂ ಮಂಗಳಾರತಿ’ ?, ಟಿಪ್ಪು ಹೆಸರಿನ ಪೂಜೆ ಮೇಲೇಕೆ ಸಂಘ ಪರಿವಾರದ ಕೆಂಗಣ್ಣು ? 

ಬಾಬಾಬುಡಾನ್ ಗಿರಿ ದತ್ತಾತ್ರೇಯ ಪೀಠ: ವ್ಯವಸ್ಥಾಪನಾ ಮಂಡಳಿ ರಚನೆಗೆ ಚರ್ಚೆ

ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾ ವಿಧಿ ನೆರವೇರಿಸಲು ಮುಜಾವರ್ ಜೊತೆಗೆ ‘ಅರ್ಚಕರ’ ನೇಮಕ ಸಂಬಂಧ  ಸಭೆಯಲ್ಲಿ ಚರ್ಚೆ ನಡೆದಿದೆ. 

Similar News