ಬಾಬರಿ ಧ್ವಂಸ: ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್‌ ಹೈಕೋರ್ಟ್

Update: 2022-11-09 12:21 GMT

ಅಲಹಾಬಾದ್: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್‌ಕೆ ಅಡ್ವಾಣಿ, ಉಮಾಭಾರತಿ, ಎಂಎಂ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಇತರರನ್ನು ಖುಲಾಸೆಗೊಳಿಸಿದ ವಿರುದ್ಧದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಸರೋಜ್ ಯಾದವ್ ಅವರ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ.

ಬಾಬರಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಸಾಧ್ವಿ ಋತಂಭರ, ಪ್ರಸ್ತುತ ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷೆ ನೃತ್ಯ ಗೋಪಾಲ್ ದಾಸ್, ಉಮಾಭಾರತಿ ಮತ್ತು ಬಿಜೆಪಿ ನಾಯಕ ವಿನಯ್ ಸಿಂಗ್ ಸೇರಿದಂತೆ 32 ಮಂದಿ ಆರೋಪಿಗಳಾಗಿದ್ದಾರೆ.

ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ತನ್ನ 2020 ರ ಆದೇಶದಲ್ಲಿ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕರು ನೀಡಿದ ವಾದಕ್ಕೆ ಅನುಗುಣವಾಗಿ, ಬಾಬರಿ ಮಸೀದಿ ಧ್ವಂಸವು ಪೂರ್ವ ಯೋಜಿತವಲ್ಲ ಎಂದು ಸಿಬಿಐ ನ್ಯಾಯಾಲಯ ಹೇಳಿತ್ತು. ಇದು ಕರಸೇವಕರ ಸ್ವಯಂಪ್ರೇರಿತ ಕೃತ್ಯ ಎಂದು ಅವರು ಬಿಜೆಪಿ ಮತ್ತು ವಿಹಿಂಪ ನಾಯಕರು ಸಮರ್ಥಿಸಿಕೊಂಡಿದ್ದರು.

Similar News