ಕಾನೂನು ತತ್ವದ ಮೇಲೆ ಆರೋಪಿಯನ್ನು ದೋಷಿಯನ್ನಾಗಿಸಬೇಕೇ ವಿನಃ ನೈತಿಕತೆ ಆಧಾರದ ಮೇಲಲ್ಲ: ಹೈಕೋರ್ಟ್

Update: 2022-11-11 13:11 GMT

ಬೆಂಗಳೂರು, ನ.11: ಸಾಕ್ಷ್ಯಗಳಿಂದ ನಿರೂಪಿತವಾದ ಕಾನೂನು ತತ್ವದ ಮೇಲೆ ಆರೋಪಿಗಳನ್ನು ದೋಷಿಗಳನ್ನಾಗಿಸಬೇಕೆ ವಿನಹ ನೈತಿಕತೆಯ ಆಧಾರದ ಮೇಲಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಕೊಲೆ ಕೇಸ್‍ವೊಂದರಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಆದೇಶ ಮಾಡಿದೆ.  

ಧಾರವಾಡ ಜಿಲ್ಲೆಯ ಬಸವರಾಜ ರಾಮಜಿ ಸೇರಿ 9 ಮಂದಿಯು ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಹೈಕೋರ್ಟ್  ನ್ಯಾಯಪೀಠವು ಮಾನ್ಯ ಮಾಡಿದೆ. 

ಈ ಕೇಸ್‍ನಲ್ಲಿ ಆರೋಪಿಗಳನ್ನು ಅಪರಾಧದಲ್ಲಿ ಸಿಲುಕಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ತನಿಖಾಧಿಕಾರಿ ಮತ್ತು ವಿಚಾರಣಾಧೀನ ನ್ಯಾಯಾಲಯು ಊಹೆಗಳನ್ನು ಆಧರಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮೃತಪಟ್ಟಿರುವ ವ್ಯಕ್ತಿ ಹಾಗೂ ಮೊದಲ ಆರೋಪಿಯ ಸೊಸೆಗೆ ಅಕ್ರಮ ಸಂಬಂಧ ಇತ್ತು. ಆರೋಪ ಖಾತರಿಗೆ ಕುಟುಂಬ ಅಥವಾ ಗ್ರಾಮದ ಯಾವುದೇ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿಲ್ಲ. ಚಾರ್ಜ್‍ಶೀಟ್‍ನಲ್ಲಿ ಬೀಸು ಹೇಳಿಕೆ ಮತ್ತು ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಸೂಕ್ತ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಲಾಗಿಲ್ಲ ಎಂದು ಪೀಠ ತಿಳಿಸಿದೆ.

Similar News