ಮುಂಚೂಣಿ ನೆಲೆ ಬಿಟ್ಟು ಕದಲಿದರೆ ಗುಂಡೇಟು: ಯೋಧರಿಗೆ ರಶ್ಯ ಎಚ್ಚರಿಕೆ

Update: 2022-11-12 17:07 GMT

ಮಾಸ್ಕೊ, ನ.12: ಉಕ್ರೇನ್ (Ukraine)ಎದುರಿಗಿನ ಯುದ್ಧದಲ್ಲಿ ಮುಂಚೂಣಿ ನೆಲೆಯಲ್ಲಿ ನಿಯೋಜಿಸಲ್ಪಟ್ಟಿರುವ ಮೀಸಲು ಯೋಧರು ತಮ್ಮ ಸ್ಥಾನವನ್ನು ತ್ಯಜಿಸಿದರೆ ಅವರ ಮೇಲೆ ಗುಂಡು ಹಾರಿಸಲಾಗುವುದು ಎಂದು ರಶ್ಯ ಸೇನೆ ಎಚ್ಚರಿಕೆ ನೀಡಿರುವುದಾಗಿ `ನ್ಯೂಸ್‍ವೀಕ್' (``Newsweek'')ವರದಿ ಮಾಡಿದೆ.

ಈ ಮಧ್ಯೆ, ಮೀಸಲು ಯೋಧರನ್ನು ಮುಂಚೂಣಿ ನೆಲೆಯಲ್ಲಿ ನಿಯೋಜಿಸಿರುವ ಬಗ್ಗೆ ಅಸಮಾಧಾನಗೊಂಡಿರುವ ಯೋಧರ ಪತ್ನಿಯರು,  ಸ್ವತಃ ಯುದ್ಧಕ್ಷೇತ್ರಕ್ಕೆ ತೆರಳಿ ತಮ್ಮ ಗಂಡಂದಿರನ್ನು ವಾಪಾಸು ಕರೆತರುವುದಾಗಿ ಹೇಳಿಕೆ ನೀಡಿರುವುದಾಗಿ ವರದಿ ಹೇಳಿದೆ. ಪತಿಯನ್ನು ಮರಳಿಸದಿದ್ದರೆ ನಿಮ್ಮನ್ನು ಹರಿದು ಚಿಂದಿ ಮಾಡುವುದಾಗಿ ಮಹಿಳೆಯೊಬ್ಬಳು ಸೇನಾಧಿಕಾರಿಗಳಿಗೆ ಹೇಳುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಶ್ಯ ಸೈನಿಕರ ನೈತಿಕತೆ ಕುಸಿದಿರುವ ಕಾರಣ ಅವರಿಗೆ ಯುದ್ಧ ಮಾಡಲು ಇಚ್ಛೆಯಿಲ್ಲ. ಈಗ ಹಿಂದಕ್ಕೆ ಸರಿಯುತ್ತಿರುವ ಯೋಧರನ್ನು ತಡೆಯಲು ರಶ್ಯ ಸೇನೆ ಸೇನೆಯ ತುಕಡಿಯೊಂದನ್ನು  ನಿಯೋಜಿಸಿದೆ ಎಂದು ಇದಕ್ಕೂ ಮುನ್ನ ಉಕ್ರೇನ್ ರಕ್ಷಣಾ ಇಲಾಖೆ ಹೇಳಿಕೆ ನೀಡಿತ್ತು.

Similar News