KSRTC ನೌಕರರ ಅಪಘಾತ ವಿಮೆ 1 ಕೋಟಿ ರೂ.ಗೆ ಏರಿಕೆ

Update: 2022-11-14 15:01 GMT

ಬೆಂಗಳೂರು, ನ. 14: ಕೆಎಸ್ಸಾರ್ಟಿಸಿ (KSRTC)ನೌಕರರಿಗೆ 1 ಕೋಟಿ ರೂಪಾಯಿ ಅಪಘಾತ ವಿಮೆಯನ್ನು ನಿಗಮವು ಘೋಷಿಸಿದೆ. ದೀಪಾವಳಿ ಉಡುಗೊರೆಯಾಗಿ ನೌಕರರಿಗೆ ನಿಗಮ 50 ಲಕ್ಷ ರೂ.ಅಪಘಾತ ವಿಮೆಯನ್ನು ನಿಗಮ ಜಾರಿಗೊಳಿಸಿತ್ತು. ಮತ್ತೆ ಇದೀಗ 50 ಲಕ್ಷ ರೂಪಾಯಿ ಸೇರಿಸಿ ವಿಮಾ ಮೊತ್ತವನ್ನು 1 ಕೋಟಿ ರೂ.ಗಳಿಗೆ ಏರಿಸಲಾಗಿದೆ.

ಸೋಮವಾರ ಎಸ್‍ಬಿಐ ಬ್ಯಾಂಕ್‍ನೊಂದಿಗೆ ನಿಗಮದ ಅಧಿಕಾರಿಗಳು ಈ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿಲ್ಲದ ವೇಳೆ ಅಪಘಾತ ಸಂಭವಿಸಿದರೂ ವಿಮಾ ಸೌಲಭ್ಯ ದೊರೆಯಲಿದೆ. ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಹಾಗೂ ಭಾಗಶಃ ಅಂಗವೈಕಲ್ಯತೆಗೆ ಒಳಗಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಸಿಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆ ಸಿಬ್ಬಂದಿಗೆ ಅನುಕೂಲ ಆಗಲಿದೆ ಎಂದು ತಿಳಿಸಲಾಗಿದೆ.

Similar News