ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Update: 2022-11-15 03:41 GMT

ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆಗಳನ್ನು ಸೇವಿಸಿದ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರಕಾರಿ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಆನೆಕಾಲು ರೋಗ ಮುಕ್ತಕ್ಕೆ ಔಷಧಿಗಳನ್ನ ಸೇವಿಸುವ ಕಾರ್ಯಕ್ರಮವಿತ್ತು. ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲಾಗಿತ್ತು. ಇದರಿಂದ ಆನೆಕಾಲು ರೋಗ ತಡೆ ಮಾತ್ರೆಗಳನ್ನು ಸೇವಿಸಿ ಮಕ್ಕಳ ಅಸ್ವಸ್ಥರಾಗಿದ್ದಾರೆ.

ಜಿಲ್ಲಾಸ್ಪತ್ರೆಗೆ ಟಿಎಚ್ಓ ಡಾ.ಹಣಮಂತ ರೆಡ್ಡಿ ಭೇಟಿ, ಪರಿಶೀಲನೆ ನಡೆಸಿದರು.

20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಮುಂದುವರಿದಿದೆ. ಇದಲ್ಲದೇ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News