ಹಾಲಿನ ದರ ಏರಿಕೆ; ಕೆಎಂಎಫ್ ಪ್ರಕಟನೆಗೆ ಸಿಪಿಎಂ ವಿರೋಧ

Update: 2022-11-15 17:20 GMT

ಬೆಂಗಳೂರು, ನ.15: ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರ ಕುಟುಂಬಗಳಿಗೆ ಯಾವುದೇ ಬೆಲೆ ಏರಿಕೆಯ ಹೊರೆಯನ್ನು ಭರಿಸುವಂತಹ ಪರಿಸ್ಥಿತಿ ಇಲ್ಲವಾಗಿದೆ. ಹೀಗಾಗಿ, ಹಾಲಿನ ದರ ಏರಿಕೆ ಬಗ್ಗೆ ನ.20ರ ನಂತರ ಚರ್ಚಿಸಿ ತೀರ್ಮಾನ ಮಾಡುವ ವಿಚಾರವನ್ನು ಹಾಗೂ ಕೆಎಂಎಫ್‍ನವರು ಹಾಲಿನ ದರ ಏರಿಕೆ ಕುರಿತಂತೆ ಪ್ರಕಟನೆ ಹೊರಡಿಸಿದ್ದನ್ನೂ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ವಿರೋಧಿಸಿದೆ.     

ಸರಕಾರ ಹಾಲು ಬೆಲೆ ಏರಿಕೆಯ ಮೂಲಕ ಮೂರು ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡುವ ಉದ್ದೇಶ ಹೊಂದಿತ್ತೆಂದು ಪ್ರಕಟಿಸುವ ಮೂಲಕ ತಾನು ಹಾಲು ಉತ್ಪಾದಕರ ಪರವಾಗಿದ್ದೇನೆಂದು. ಮತ್ತೊಂದು ಕಡೆ ಆ ಪ್ರಕಟನೆಯನ್ನು ವಾಪಾಸು ಪಡೆಯಲಾಗಿದೆಯೆಂಬ ಅಭಿಪ್ರಾಯವನ್ನು ತೂರಿ ಬಿಡುವ ಮೂಲಕ ಗ್ರಾಹಕರ ಬೆಂಬಲ ಪಡೆಯುವ ದುರುದ್ದೇಶವನ್ನು ಸರಕಾರ ಹೊಂದಿದೆ ಎಂದು ಕಿಡಿಕಾರಿದೆ.

ಸರಕಾರದ ಈ ಕುತಂತ್ರವನ್ನು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದ್ದು, ಉತ್ಪಾದನೆಯಲ್ಲಿ ತೊಡಗಿರುವ ಲಕ್ಷಾಂತರ ಹಾಲು ಉತ್ಪಾದಕರು ಹಾಲು ಉತ್ಪಾದನೆಯ ವೆಚ್ಚವನ್ನು ಅವರು ಪಡೆಯುವ ಹಾಲಿನ ದರದಿಂದ ಸರಿ ದೂಗಿಸಲಾಗದೇ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಖಂಡಿಸಿದ್ದಾರೆ. 

Similar News