ಮಧ್ಯಪ್ರದೇಶ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್

Update: 2022-11-27 06:54 GMT

ಭೋಪಾಲ್: ಪ್ರಸ್ತುತ ಮಧ್ಯಪ್ರದೇಶದ ಮೂಲಕ ಹಾದುಹೋಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಬೈಕ್ ಸವಾರಿ ಮಾಡಿದರು.

ತಲೆಗೆ ಹೆಲ್ಮೆಟ್ ಧರಿಸಿ ರಾಹುಲ್ ಬೈಕ್ ಚಲಾಯಿಸಿದರು.  ಭದ್ರತಾ ಸಿಬ್ಬಂದಿ ರಸ್ತೆಯನ್ನು ತೆರವುಗೊಳಿಸಿದ್ದಾರೆ,  ರಾಹುಲ್ ಗಾಂಧಿಯವರು ಮ್ಹೌ ನಗರದಲ್ಲಿ ನೀಲಿ ಕಾರ್ಪೆಟ್ ಮೇಲೆ ಸವಾರಿ ಮಾಡುತ್ತಿದ್ದಾಗ ಎರಡು ಬದಿಗಳಿಂದ ಜನಸಂದಣಿಯು ಹರ್ಷೋದ್ಗಾರ ಮಾಡಿತು.

ರಾಹುಲ್ ರೊಂದಿಗೆ  ಪ್ರಾಣಿಗಳ ಕಲ್ಯಾಣದ ಬಗ್ಗೆ ಚರ್ಚಿಸಲು ಇಬ್ಬರು ಬೈಕ್‌ನಲ್ಲಿ ಭಾರತ್ ಜೋಡೊ ಯಾತ್ರೆಯನ್ನು ಸೇರಿಕೊಂಡಿದ್ದರು.  ಇವರ ಬೈಕ್ ನಲ್ಲಿ ವಯನಾಡ್ ಸಂಸದ ಸವಾರಿ ಮಾಡಿದರು. ಇವರಲ್ಲಿ ಒಬ್ಬರು ಗ್ವಾಲಿಯರ್ ಮೂಲದ ಸಿವಿಲ್ ಇಂಜಿನಿಯರ್ ಆಗಿದ್ದು  ರಜತ್ ಅವರು ಬೀದಿ ನಾಯಿಗಳ ಆರೈಕೆಗಾಗಿ ಕೆಲಸ ಮಾಡುತ್ತಾರೆ. ರಜತ್ ಅವರ 10-ತಿಂಗಳ ಜರ್ಮನ್ ಶೆಫರ್ಡ್ ಮಾರ್ವೆಲ್ ಹೆಸರಿನ ಶ್ವಾನ ಅವರೊಂದಿಗಿದೆ. ವಿಶೇಷವಾಗಿ ರಚಿಸಲ್ಪಟ್ಟ ಈ ಬೈಕ್ ನಲ್ಲಿ ರಾಹುಲ್ ಸವಾರಿ ಮಾಡಿದರು.

Similar News