ಕೋವಿಡ್-19 ಹಿನ್ನೆಲೆಯಲ್ಲಿ ಭಾರೀ ನಿರ್ಬಂಧಕ್ಕೆ ಚೀನಾ ನಾಗರಿಕರಿಂದ ಪ್ರತಿಭಟನೆ

Update: 2022-11-27 06:45 GMT

ಶಾಂಘೈ: ಬೆಂಕಿಯಿಂದಾಗಿ 10 ಮಂದಿ ಮೃತಪಟ್ಟ ಘಟನೆ ಹಾಗೂ ಕೋವಿಡ್-19 ಹಿನ್ನಲೆಯಲ್ಲಿ  ಭಾರೀ ನಿರ್ಬಂಧ ವಿಧಿಸಿರುವುದರಿಂದ ಆಕ್ರೋಶ ಗೊಂಡಿರುವ ಚೀನಾದ ಹಲವಾರು ನಗರಗಳ ನಿವಾಸಿಗಳು ರವಿವಾರ ಮುಂಜಾನೆ ಶಾಂಘೈನಲ್ಲಿ ಪ್ರತಿಭಟನೆ ನಡೆಸಿದರು.

 ಕ್ಸಿನ್‌ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿಯಲ್ಲಿನ ಬಹುಮಹಡಿ ಕಟ್ಟಡದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅನಾಹುತದಲ್ಲಿ 10 ಜನರು ಸಾವನ್ನಪ್ಪಿದ್ದರು, ಇದು ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಏಕೆಂದರೆ ಕಟ್ಟಡವು ಭಾಗಶಃ ಲಾಕ್‌ಡೌನ್ ಆಗಿರುವುದರಿಂದ ನಿವಾಸಿಗಳು ಸಮಯಕ್ಕೆಸರಿಯಾಗಿ ಬೆಂಕಿಯಿಂದ  ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅನೇಕ ಇಂಟರ್ನೆಟ್ ಬಳಕೆದಾರರು ಊಹಿಸಿದ್ದಾರೆ. ಅಧಿಕಾರಿಗಳು   ಇದನ್ನು ನಿರಾಕರಿಸಿದರು.

ಚೀನಾದ ಅತ್ಯಂತ ಜನನಿಬಿಡ ನಗರ ಹಾಗೂ  ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ, ನಿವಾಸಿಗಳು ಶನಿವಾರ ರಾತ್ರಿ ನಗರದ ವುಲುಮುಕಿ ರಸ್ತೆಯಲ್ಲಿ ಜಮಾಯಿಸಿದ್ದರು.  ರವಿವಾರ ಮುಂಜಾನೆ ಪ್ರತಿಭಟನೆ ನಡೆಸಲಾಯಿತು.

Similar News