ಭಾರತೀಯ ನೌಕಾ ದಳದ ಸಬ್ ಲೆಫ್ಟಿನೆಂಟ್ ಆಗಿ ಕೊಡಗಿನ ಸ್ಪಂದನ ಸುರೇಶ್ ಆಯ್ಕೆ

Update: 2022-11-27 14:14 GMT

ಮಡಿಕೇರಿ ನ.27: ಕೊಡಗಿನ ಸುಂಟಿಕೊಪ್ಪದ ಸ್ಪಂದನ ಸುರೇಶ್ ಭಾರತೀಯ ನೌಕಾ ದಳದ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ. ಎಝೆಮಾಲ ನೇವಲ್ ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಪದಗ್ರಹಣ ಸಮಾರಂಭದಲ್ಲಿ ಬ್ರೆವ್ ಹಾರ್ಟ್ ತಂಡದ ಕಮಾಂಡರ್ ಆಗಿ ತಂಡವನ್ನು ಮುನ್ನಡಿಸಿದ್ದಾರೆ ಮತ್ತು ಪ್ರಸ್ತುತ ನೌಕಾದಳದ ವಿನ್ಯಾಸ ತಂತ್ರಜ್ಞಾನದಲ್ಲಿ  ಉನ್ನತ ತರಬೇತಿಗಾಗಿ ವಿಶಾಖ ಪಟ್ಟಣದ ನೌಕಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ.

ಸುಂಟಿಕೊಪ್ಪದ ಸೇಂಟ್ ಅನ್ಸ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸ್ಪಂದನ ಬೆಂಗಳೂರಿನ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. 

ಸ್ಪಂದನ ಸುಂಟಿಕೊಪ್ಪದ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಸುರೇಶ್ ಕುಮಾರ್ ಹಾಗೂ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪುಷ್ಪಲತಾ ದಂಪತಿ ಪುತ್ರಿ.
 

Similar News