ಉ.ಪ್ರ.ದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ನೋಯ್ಡಾಕ್ಕೆ ನೇಮಕ

Update: 2022-11-29 15:44 GMT

ನೋಯ್ಡಾ, ನ. 29: ಉತ್ತರಪ್ರದೇಶ ಸರಕಾರ ಐಪಿಎಸ್ ಅಧಿಕಾರಿ ಲಕ್ಷ್ಮೀ ಸಿಂಗ್(Lakshmi Singh) ಅವರನ್ನು ನೋಯ್ಡಾದ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ. ರಾಜ್ಯದ ಪೊಲೀಸ್ ಕಮಿಷನರೇಟ್ ನ  ಮುಖ್ಯಸ್ಥರಾಗಿ ಮಹಿಳಾ ಅಧಿಕಾರಿಯೊಬ್ಬರು ನೇಮಕರಾಗುತ್ತಿರುವುದು ಇದೇ ಮೊದಲು.

2000 ಬ್ಯಾಚ್ ನ ಅಧಿಕಾರಿಯಾಗಿರುವ ಲಕ್ಷ್ಮೀ ಸಿಂಗ್ ಅವರನ್ನು ಅಲೋಕ್ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಕ ಮಾಡಲಾಗಿದೆ.   ಅವರು ಗೌತಮ್ ಬುದ್ಧ ನಗರಕ್ಕೆ ನೇಮಕರಾಗಲಿದ್ದು, ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ನೂತನ ಆಗ್ರಾ, ವಾರಣಾಸಿ ಹಾಗೂ ಪ್ರಯಾಗ್ ರಾಜ್ ಕಮಿಷನರೇಟ್ ಗೆ  ಸೇರಿ ರಾಜ್ಯದಲ್ಲಿ 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕ ಪಟ್ಟಿಯನ್ನು ಉತ್ತರ ಪ್ರದೇಶ ಸರಕಾರ ಸೋಮವಾರ ರಾತ್ರಿ ಬಿಡುಗಡೆ ಮಾಡಿತ್ತು.

48ರ ಹರೆಯದ ಲಕ್ಷ್ಮೀ ಸಿಂಗ್ ಅವರು ಲಕ್ನೋ ವಲಯದ ಐಜಿಪಿ ಆಗಿ ಸೇವೆ ಸಲ್ಲಿಸಿದ್ದರು.

Similar News