ಫಿರೋಝಾಬಾದ್‌ನಲ್ಲಿ ಅಗ್ನಿ ಅನಾಹುತ : 3 ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಮೃತ್ಯು

Update: 2022-11-30 05:08 GMT

ಫಿರೋಝಾಬಾದ್: ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ ಕುಟುಂಬವೊಂದು ನೆಲೆಸಿದ್ದ  ಕಟ್ಟಡದ ನೆಲ ಅಂತಸ್ತಿನಲ್ಲಿರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ.

ಕುಟುಂಬದ ಇತರ ಮೂವರು ಸದಸ್ಯರು ಕೂಡ ಬೆಂಕಿಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ವರ್ಟರ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿ ತಕ್ಷಣವೇ ಕುಟುಂಬ ವಾಸಿಸುತ್ತಿದ್ದ ಮೇಲಿನ ಮಹಡಿಗೆ ವ್ಯಾಪಿಸಿತು ಎಂದು ಫಿರೋಝಾಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ಹೇಳಿದ್ದಾರೆ.

18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಯತ್ನದ ಮೂಲಕ ಬೆಂಕಿಯನ್ನು ನಂದಿಸಿದವು. ಈ ಪ್ರದೇಶವು ದಟ್ಟಣೆಯಿಂದ ಕೂಡಿರುವುದರಿಂದ, ಅಗ್ನಿ ಶಾಮಕ ದಳದವರು  ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಯಿತು ಎಂದು ತಿವಾರಿ ಹೇಳಿದರು.

ಕಾರ್ಖಾನೆಯಲ್ಲಿನ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ನಂಬಲಾಗಿದೆ. ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ತಿವಾರಿ ಹೇಳಿದರು.

Similar News