ಕಿರುಕುಳದ ತಾಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು: ಎಸ್‌ಡಿಪಿಐ

Update: 2022-11-30 14:36 GMT

ಉಡುಪಿ: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ಕಿರುಕುಳದ ತಾಣಗಳಾಗುತ್ತಿವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ದಿನೇ ದಿನೇ ಸವಾಲುಗಳು ಹೆಚ್ಚಾಗುತ್ತಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಆರೋಪಿಸಿದ್ದಾರೆ.

ಒಂದೆಡೆ ದುಬಾರಿ ಶುಲ್ಕದ ಹೆಸರಿನಲ್ಲಿ ಶೋಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ರ್ಯಾಗಿಂಗ್ ಪಿಡುಗು ಕಾಡುತ್ತಿದೆ. ಇದರಿಂದ ತಪ್ಪಿಸಿಕೊಂಡ ಕಾಲೇಜುಗಳಲ್ಲಿ ಹಿಜಾಬ್ ಹೆಸರಿನಲ್ಲೋ, ಉತ್ತಮ ಫಲಿತಾಂಶ ತರಲೇ ಬೇಕೆಂಬ ಒತ್ತಡದ ಮೂಲಕವೋ ನಿರಂತರವಾಗಿ ಕಿರುಕುಳ ನಡೆಯುತ್ತಿರುತ್ತದೆ. ಇಂತಹ ಕಿರುಕುಳಗಳಿಂದ ಹೊರಬರಲಾರದ ಕೆಲವು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News