ರಾಹುಲ್ ಗಾಂಧಿ, ಇತರ ಕಾಂಗ್ರೆಸ್ ನಾಯಕರು ಚಳಿಗಾಲದ ಅಧಿವೇಶನದಿಂದ ಹೊರಗುಳಿಯುವ ಸಾಧ್ಯತೆ: ವರದಿ

Update: 2022-12-03 04:35 GMT

ಹೊಸದಿಲ್ಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ Rahul Gandhi,  ಜೈರಾಮ್ ರಮೇಶ್ ಹಾಗೂ  ದಿಗ್ವಿಜಯ ಸಿಂಗ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ನಾಯಕರು, ರಾಹುಲ್  ಗಾಂಧಿಯವರೊಂದಿಗೆ ಪಕ್ಷ ವತಿಯಿಂದ  ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ Bharat Jodo Yatra ತೊಡಗಿಸಿಕೊಳ್ಳುವುದನ್ನು ಮುಂದುವರೆಸುವ ನಿರೀಕ್ಷೆಯಿದೆ.

ಪಕ್ಷದ ನಾಯಕತ್ವವು ಭಾರತ್ ಜೋಡೋ ಯಾತ್ರೆಯಿಂದ ಗಮನವನ್ನು ಬೇರಡೆಗೆ ಬದಲಾಯಿಸಲು ಬಯಸುವುದಿಲ್ಲ ಹಾಗೂ  ಅದಕ್ಕಾಗಿಯೇ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಚಳಿಗಾಲದ ಅಧಿವೇಶನದಿಂದ ದೂರವುಳಿದು  ಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರದಿಂದ ಆರಂಭವಾಗಲಿದ್ದು, ಹಳೆ ಸಂಸತ್ ಭವನದಲ್ಲಿ ನಡೆಯಲಿದೆ. ಗುಜರಾತ್ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನ ಆರಂಭವನ್ನು ಒಂದು ತಿಂಗಳು ತಡವಾಗಿ ಅರಂಭವಾಗುತ್ತಿದೆ.

ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ (ಎಲ್‌ಒಪಿ) ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪಕ್ಷದ ಸ್ಟ್ರಾಟೆಜಿ ಗ್ರೂಪ್ ಸಭೆಯು ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ.

Similar News