ಮಲಯಾಳಂನ ಹಿರಿಯ ನಟ ಕೆ.ಎಸ್. ಪ್ರೇಮ್ ಕುಮಾರ್ ನಿಧನ

Update: 2022-12-03 11:09 GMT

ತಿರುವನಂತಪುರಂ, ಡಿ.3: ಮಲಯಾಳಂನ ಹಿರಿಯ ಸಿನೆಮಾ ನಟ, ರಂಗಭೂಮಿ ಕಲಾವಿದ ಕೊಚ್ಚು ಪ್ರೇಮನ್ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪ್ರೇಮಕುಮಾರ್ (KS Premkumar) (68) ಶನಿವಾರ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಜೂನ್1, 1955ರಂದು ತಿರುವನಂತಪುರದಲ್ಲಿ ಜನಿಸಿದ ಅವರು,  ಪೇಯಾಡಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ
ತಿರುವನಂತಪುರದ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. 

ರಂಗಭೂಮಿಯಲ್ಲಿ ಯಶಸ್ವಿ ನಟನಾಗಿದ್ದ, ಕೊಚ್ಚು ಪ್ರೇಮನ್ ಬಳಿಕ ತಮ್ಮ ಗಮನವನ್ನು ಸಿನೆಮಾದತ್ತ ಬದಲಾಯಿಸಿದರು. 1979 ರಲ್ಲಿ 'ಏಝು ನಿರಂಗಲ್' (ಏಳು ಬಣ್ಣಗಳು) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ವಲ್ಪ ಸಮಯದ ನಂತರ, ಅವರು 1996 ರಲ್ಲಿ ಸೂಪರ್ಹಿಟ್ ಚಲನಚಿತ್ರ 'ದಿಲ್ಲಿವಾಲಾ ರಾಜಕುಮಾರ' ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡರು. ಅವರು ಕಾಳಿದಾಸ ಕಲಾಕೇಂದ್ರಂ, ಕೇರಳ ಥಿಯೇಟರ್ಸ್ ಮತ್ತು ಸಂಘಚೇತನದಂತಹ ನಾಟಕ ತಂಡಗಳಲ್ಲಿ ಕೆಲಸ ಮಾಡಿದ್ದರು. 2021 ರಲ್ಲಿ ಬಿಡುಗಡೆಯಾದ 'ಒರು ‌ಪಪ್ಪಡವಡ ಪ್ರೇಮಂ' ಅವರ ಕೊನೆಯ ಚಿತ್ರವಾಗಿದೆ.

Similar News