ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಮತದಾರರ ಪಟ್ಟಿಯಿಂದ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷರ ಹೆಸರು ನಾಪತ್ತೆ

Update: 2022-12-04 08:02 GMT

ಹೊಸದಿಲ್ಲಿ: ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಗೆ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ರವಿವಾರ ಹೇಳಿದ್ದಾರೆ.

ತನ್ನ ಹೆಸರು ಮತದಾರರ ಪಟ್ಟಿಯಲ್ಲಾಗಲೀ ಅಥವಾ ಅಳಿಸಿದ ಪಟ್ಟಿಯಲ್ಲಾಗಲೀ ಇಲ್ಲ ಎಂದು ಚೌಧರಿ ಹೇಳಿದ್ದಾರೆ.

“ನನ್ನ ಹೆಸರು ಮತದಾರರ ಪಟ್ಟಿಯಲ್ಲಾಗಲೀ ಅಥವಾ ಅಳಿಸಿದ ಪಟ್ಟಿಯಲ್ಲಾಗಲೀ ಇಲ್ಲ. ನನ್ನ ಪತ್ನಿ ಮತ ಹಾಕಿದ್ದಾಳೆ. ಅಧಿಕಾರಿಗಳು ಮತದಾರರ ಪಟ್ಟಿ ಪರಿಶೀಲಿಸುತ್ತಿದ್ದಾರೆ” ಎಂದು ದಳ್ಳುಪುರದ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದ್ದ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ಎಂಸಿಡಿಯ 250 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದ್ದು, ಸಂಜೆ 5.30ಕ್ಕೆ ಮುಕ್ತಾಯವಾಗಲಿದೆ.

Similar News