ಬೈಕ್‌ಗೆ BJP ಪರಿಷತ್ ಸದಸ್ಯ ರವಿಕುಮಾರ್‌ ಕಾರು ಢಿಕ್ಕಿ: 'ನೀನು ಯಾವ ಸೀಮೆ ಎಂಎಲ್‌ಸಿ?' ಎಂದು ಜನರ ಆಕ್ರೋಶ

ಗಾಯಾಳು ಬೈಕ್​ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕಿದ ಆರೋಪ

Update: 2022-12-04 14:50 GMT

ಕೋಲಾರ, ಡಿ.4: ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್​.ರವಿ ಕುಮಾರ್ ಅವರ ಕಾರು ಬೈಕ್​ ಒಂದಕ್ಕೆ ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಬೈಕ್‌ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕಿದ್ದಕ್ಕೆ ಸಾರ್ವಜನಿಕರು ಪರಿಷತ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ.  

ರವಿವಾರ ತಾಲೂಕಿನ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎನ್​.ರವಿ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಬೈಕ್ ಒಂದಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಬೈಕ್ ಸವಾರ ಗೋಪಾಲ್​ ಎಂಬುವರಿಗೆ ಗಾಯಗಳಾಗಿವೆ. ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ರವಿ ಕುಮಾರ್ ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರಿಂದ ಕೋಪಗೊಂಡ ಸಾರ್ವಜನಿಕರು 'ನೀನು ಯಾವ ಸೀಮೆ ಎಂಎಲ್‌ಸಿ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. 

ಘಟನೆ ಬಳಿಕ  ಕಾರು ಹತ್ತಿ ಕುಳಿತ ರವಿಕುಮಾರ್‌ ಹೊರ ಅವರನ್ನು ‘ಇಳಿಯಯ್ಯಾ ಕೆಳಗೆ, ಪೊಲೀಸರೇನು ನಿನ್ನ ಜೇಬಿನಲ್ಲಿದ್ದಾರಾ?’ ಎಂದು ಹೇಳಿ ಮತ್ತೆ ಕೆಳಗಿಳಿಸಿದರು. ಕೋಲಾರಕ್ಕೆ ಬರುತ್ತಿದ್ದ ರವಿಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ‘ನೀವು ಯಾವ ಸೀಮೆ ಎಂಎಲ್‌ಸಿ? ನಿನಗೆ ಮಾನ ಮರ್ಯಾದೆ ಇದೆಯಾ? ಎಂಎಲ್‌ಸಿ, ಎಂಎಲ್‌ಎಯಾದರೆ ಏನು ಬೇಕಾದರೂ ಮಾಡಬಹುದಾ? ಚೂರಾದರೂ ಮಾನವೀಯತೆ, ಸೌಜನ್ಯ ಇರಬೇಕಲ್ಲವೇ' ಎಂದು ಪ್ರಶ್ನಿಸಿದ್ದಾರೆ.

Full View

Similar News