6 ತಿಂಗಳ ಬಳಿಕ ಭೂಮಿಗೆ ಮರಳಿದ ಚೀನಾದ ಗಗನಯಾತ್ರಿಗಳು

Update: 2022-12-04 18:10 GMT

ಬೀಜಿಂಗ್, ಡಿ.4: ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ನೆಲೆಸಿದ್ದ ಚೀನಾದ ಮೂವರು ಗಗನಯಾತ್ರಿಗಳು  ರವಿವಾರ ಶೆನ್‍ಝೊವು ಗಗನನೌಕೆಯಲ್ಲಿ ಸುರಕ್ಷಿತವಾಗಿ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಹ್ಯಾಕಾಶ ಕೇಂದ್ರದಲ್ಲಿ ಬಂದಿಳಿದಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್‍ಹುವ ಸುದ್ಧಿಸಂಸ್ಥೆ ವರದಿ ಮಾಡಿದೆ.

ಚೆನ್ ಡಾಂಗ್, ಲಿಯು ಯಾಂಗ್ ಮತ್ತು ಕೈಕ್ಸುಚೆ ಕಳೆದ 183 ದಿನಗಳಿಂದ ಚೀನಾದ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿ ಅದರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಕೈ ಜೋಡಿಸಿದ್ದರು.

ಇದೀಗ ಇವರ ಸ್ಥಾನದಲ್ಲಿ ಮತ್ತೆ ಮೂವರು ಗಗನ ಯಾತ್ರಿಗಳನ್ನು ನವೆಂಬರ್ 29ರಂದು ಶೆನ್‍ಝೊವು- 15 ಗಗನನೌಕೆಯಲ್ಲಿ ಅಂತರಿಕ್ಷಕ್ಕೆ ರವಾನಿಸಲಾಗಿದೆ. ಈ ವರ್ಷಾಂತ್ಯಕ್ಕೆ ಅಂತರಿಕ್ಷ ನಿಲ್ದಾಣದ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದು ಚೀನಾದ ಉದ್ದೇಶವಾಗಿದೆ. 

Similar News