ಹಿಮಾಚಲದಲ್ಲಿ 40 ಸ್ಥಾನಗಳನ್ನು ಪಡೆದರೆ ಆಪರೇಷನ್ ಕಮಲದ ಭಯವಿಲ್ಲ: ಕಾಂಗ್ರೆಸ್

Update: 2022-12-08 09:10 GMT

ಹೊಸದಿಲ್ಲಿ: ನಾವು 40 ಸ್ಥಾನಗಳನ್ನು ಪಡೆದರೆ ಆಪರೇಷನ್ ಕಮಲದ ಭಯವಿಲ್ಲ ಎಂದು ಹಿಮಾಚಲದಲ್ಲಿ ಗೆಲುವಿನ ಹಾದಿಯಲ್ಲಿರುವ  ಕಾಂಗ್ರೆಸ್ ಹೇಳಿದೆ.

ಈಗ ತನ್ನ ಶಾಸಕರು ಒಟ್ಟಿಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದೆ.

"ನಮ್ಮ ಶಾಸಕರನ್ನು ಸಂಭಾವ್ಯ ಕುದುರೆ ವ್ಯಾಪಾರದಿಂದ  ತಪ್ಪಿಸಲು  90 ಕಿಮೀ ದೂರದ ಚಂಡೀಗಢಕ್ಕೆ ಸ್ಥಳಾಂತರಿಸಬಹುದು.68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ದಾಟಿದರೆ ಬಿಜೆಪಿಯ ಆಪರೇಶನ್  ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ'' ಎಂದು ಹಿಮಾಚಲದ ಕಾಂಗ್ರೆಸ್ ವೀಕ್ಷಕ ರಾಜೀವ ಶುಕ್ಲಾ ಸುದ್ದಿಗಾರರಿಗೆ ತಿಳಿಸಿದರು.

Similar News