5,8ನೇ ತರಗತಿಯ ಯಾರನ್ನೂ ಅನುತ್ತೀರ್ಣ ಮಾಡಲ್ಲ: ಸಚಿವ ಬಿ.ಸಿ.ನಾಗೇಶ್‌

Update: 2022-12-24 17:05 GMT

ತುಮಕೂರು: ಮಕ್ಕಳ ಮೌಲ್ಯಮಾಪನ ಉದ್ದೇಶದಿಂದ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದರು. 

ನಗರದ ಏಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ರುಪ್ಸಾ ಕರ್ನಾಟಕ ರಾಜ್ಯ ಸಂಘಟನೆ ಹಾಗೂ ತುಮಕೂರು ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಟ್ರಸ್ಟ್(ರಿ) ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

'ಸರಕಾರ ಐದು ಮತ್ತು ಎಂಟನೆ ತರಗತಿ ಮಕ್ಕಳ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಹೊರಡಿಸಿರುವ ಸುತ್ತೋಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಪ್ಪಾಗಿ ಆರ್ಥೈಸಿದ್ದಾರೆ. ಅದು ಪಬ್ಲಿಕ್ ಪರೀಕ್ಷೆಯಲ್ಲ. ಯಾವುದೇ ವಿದ್ಯಾರ್ಥಿಯನ್ನು ಫೈಲ್ ಮಾಡುವುದಿಲ್ಲ. ಆತನ ಕಲಿಕೆಯನ್ನು ಮೌಲ್ಯ ಮಾಪನ ಮಾಡುವುದಷ್ಟೇ ಕೆಲಸವನ್ನು ಮಾಡಲಿದೆ' ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

Similar News