ಭಾರತದ ಮೂಲಭೂತ ತತ್ವಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ: ಖರ್ಗೆ ಕಳವಳ

Update: 2022-12-28 15:10 GMT

ಹೊಸದಿಲ್ಲಿ, ಡಿ.29: ಭಾರತೀಯ ಸಮಾಜವು ದ್ವೇಷದಿಂದ ವಿಭಜನೆಗೊಂಡಿದೆ ಹಾಗೂ ಅದರ ಮೂಲಭೂತ ತತ್ವಗಳ ಮೇಲೆ ನಿರಂತರವಾದ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬುಧವಾರ ದಿಲ್ಲಿಯಲ್ಲಿರುವ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ನಾಯಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ‘‘ಭಾರತೀಯರು ಹಣದುಬ್ಬರ ಹಾಗೂ ನಿರುದ್ಯೋಗದಿಂದ ಬಾಧಿತರಾಗಿದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅದರ ಗೊಡವೆಯೇ ಇಲ್ಲ.‘‘ ಭಾರತದ ಮೂಲಭೂತ ತತ್ವಗಳ ಮೇಲೆ ನಿರಂತರವಾದ ದಾಳಿ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ. ದೇಶಾದ್ಯಂತ ದ್ವೇಷದ ಹೊಂಡವನ್ನು ಅಗೆಯಲಾಗುತ್ತಿದೆ ಎಂದವರು ಮಾರ್ಮಿಕವಾಗಿ ಹೇಳಿದರು.

ಸೆಪ್ಟೆಂಬರ್ನಲ್ಲಿ ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೊ ಯಾತ್ರೆಯ ಬಗ್ಗೆ ಪ್ರಸ್ತಾವಿಸಿದ ಖರ್ಗೆ, ಈ ಯಾತ್ರೆಯಲ್ಲಿ ದೇಶದ ಎಲ್ಲಾ ಸ್ತರಗಳ ನಾಗರಿಕರು ಪಾಲ್ಗೊಂಡಿದ್ದಾರೆಂದು ಹೇಳಿದರು. ‘‘ ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು,ನಾವು ಅದರಲ್ಲಿ ಯುಜನರು, ಮಹಿಳೆಯರು ಹಾಗೂ ಚಿಂತಕರನ್ನು ಸೇರ್ಪಡೆಗೊಳಿಸಬೇಕಾಗಿದೆ ರಾಹುಲ್ ಗಾಂಧಿಯವರ ಭಾರತ್ಜೋಡೊ ಯಾತ್ರೆಯ ಮೂಲಕ ಆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಖರ್ಗೆ ಸಭೆಯನ್ನುದ್ದೇಶಿಸಿ ಹೇಳಿದರು. ಭಾರತ್ ಜೋಡೊ ಯಾತ್ರೆಯು ನಮ್ಮ ಎದುರಾಳಿಗಳ ಜಂಘಾಬಲವನ್ನು ಉಡುಗಿಸಿದೆ. ಈ ಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕಕಾಂಗ್ರೆಸ್ ಆಗ್ರಹಿಸುತ್ತದೆ ’’ ಎಂದು ಖರ್ಗೆ ತಿಳಿಸಿದರು.

‘‘ದಲಿರು, ಬಡವರನ್ನು ಕಟ್ಟಿಹಾಕಿದ್ದ ಸಂಕೋಲೆಗಳನ್ನು ತುಂಡರಿಸುವ ಧೈರ್ಯವನ್ನು ಕಾಂಗ್ರೆಸ್ ಪಕ್ಷವು ತೆಗೆದುಕೊಂಡಿತ್ತು. ಪ್ರಜಾಪ್ರಭುತ್ವವನ್ನು ಬಲಿಷ್ಠವಾಗಿಡಲು ಪಂಡಿತ ಜವಾಹರಲಾಲ್ ನೆಹರೂ ಅವರು ತನ್ನ ಸಂಪುಟದಲ್ಲಿ ಐವರು ಕಾಂಗ್ರೆಸೇತರ ಸಚಿವರನ್ನು ನೇಮಿಸಿಕೊಂಡಿದ್ದು. ಎಲ್ಲರನ್ನೂ ಜೊತೆಯಾಗಿ ಒಯ್ಯುವ ತತ್ವವನ್ನು ಅದು ಪ್ರದರ್ಶಿಸಿದೆ’’ 

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ

Similar News