ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕ

Update: 2023-01-14 16:05 GMT

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಡಾ.ಬಿ.ಎಲ್.ಶಂಕರ್ ನೇತೃತ್ವದಲ್ಲಿ ವಿಭಾಗವಾರು ಸಹ ಅಧ್ಯಕ್ಷರು, ಮುಖ್ಯ ಸಂಯೋಜಕರು ಹಾಗೂ ಸಂಯೋಜಕರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ಕಲಬುರಗಿ ವಿಭಾಗ-ಡಾ.ಶರಣ ಪ್ರಕಾಶ್ ಪಾಟೀಲ್, ಬೆಳಗಾವಿ ವಿಭಾಗ-ಸಂತೋಷ್ ಲಾಡ್, ಬೆಂಗಳೂರು-ರಿಝ್ವಾನ್ ಅರ್ಶದ್, ಮೈಸೂರು-ಡಾ.ಯತೀಂದ್ರ ಸಿದ್ಧರಾಮಯ್ಯ, ಮಧ್ಯ ಕರ್ನಾಟಕ ಚಂದ್ರಪ್ಪ ಹಾಗೂ ಕರಾವಳಿ ಕರ್ನಾಟಕ ವಿಭಾಗಕ್ಕೆ ಮಂಜುನಾಥ್ ಭಂಡಾರಿ ಅವರನ್ನು ನೇಮಕ ಮಾಡಲಾಗಿದೆ.

ಮುಖ್ಯ ಸಂಯೋಜಕರಾಗಿ: ಶಾಸಕರಾದ ಅಬ್ಬಯ್ಯ ಪ್ರಸಾದ್, ನಾಗೇಂದ್ರ, ಆನಂದ್ ಸಿದ್ದು ನ್ಯಾಮಗೌಡ, ಸೌಮ್ಯಾ ರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ರೂಪಾ ಶಶಿಧರ್, ಗಣೇಶ್ ಹುಕ್ಕೇರಿ, ಡಾ.ರಂಗನಾಥ್, ಪ್ರಕಾಶ್ ರಾಠೋಡ್, ಕೆ.ಗೋವಿಂದರಾಜ್, ನಸೀರ್ ಅಹ್ಮದ್, ಹರ್ಷ ಮೋಯ್ಲಿ ಸೇರಿದಂತೆ 32 ಮಂದಿಯನ್ನು ನೇಮಿಸಲಾಗಿದೆ. ಸಂಯೋಜಕರು ಹಾಗೂ ಜಂಟಿ ಸಂಯೋಜಕರಾಗಿ ನೂರಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಲಾಗಿದೆ.

ಜಿಲ್ಲಾಧ್ಯಕ್ಷರು: ಬಾಗಲಕೋಟೆ-ನಾಗರಾಜ್ ಹಡಲಿ, ಹುಬ್ಬಳ್ಳಿ-ಧಾರವಾಡ ನಗರ ಮದನ್ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡ ಗ್ರಾಮೀಣ-ಶಿವಾನಂದ ಕರಿಗಾರ್, ಹಾವೇರಿ-ಪುಟ್ಟಪ್ಪ ನರೇಗಲ್, ವಿಜಯಪುರ-ಮುಹಮ್ಮದ್ ರಫೀಕ್ ಟಪಾಲ್, ಬೆಂಗಳೂರು ಗ್ರಾಮೀಣ-ಲಕ್ಷ್ಮಿಪತಿ, ಬೆಂಗಳೂರು ಕೇಂದ್ರ-ರಘುವೀರ್ ಗೌಡ, ಬೆಂಗಳೂರು ದಕ್ಷಿಣ-ಆರ್.ಸೋಮಶೇಖರ್ ರೆಡ್ಡಿ, ಚಿಕ್ಕಬಳ್ಳಾಪುರ- ನಾರಾಯಣಸ್ವಾಮಿ, ದಾವಣಗೆರೆ-ಶಾಮನೂರು ಟಿ.ಬಸವರಾಜ್, ಶಿವಮೊಗ್ಗ-ಎನ್.ರಮೇಶ್, ತುಮಕೂರು-ರವಿಕುಮಾರ್ ರಾಯಸಂದ್ರ.

ಬಳ್ಳಾರಿನಗರ- ಕೆ.ಎಸ್.ಎಲ್. ಸ್ವಾಮಿ, ಬಳ್ಳಾರಿ ಗ್ರಾಮೀಣ-ಮುಂಡರಗಿ ನಾಗರಾಜ್, ಬೀದರ್-ಅಮೃತರಾವ್ ಚಿಂಕೋಡ್, ಕೊಪ್ಪಳ-ವೆಂಕಣ್ಣ ಯರಾಸಿ, ರಾಯಚೂರು-ಕೆ.ಶಾಂತಪ್ಪ, ವಿಜಯನಗರ-ಎಚ್.ಎನ್.ಮುಹಮ್ಮದ್ ಇಮಾಮ್ ನಾಝೀನ್, ಚಾಮರಾಜನಗರ-ಎಸ್.ಶಿವಕುಮಾರ್, ಚಿಕ್ಕಮಗಳೂರು-ಸೈಯದ್ ಹನೀಫ್, ಕೊಡಗು-ಟಿ.ಪಿ.ರಮೇಶ್, ಮಂಡ್ಯ-ಡಾ.ಎಚ್.ಕೃಷ್ಣ, ಉಡುಪಿ-ಹರೀಶ್ ಕಿಣಿ, ರಾಮನಗರ-ಸಿ.ಎನ್.ವೆಂಕಟೇಶ್, ಹಾಸನ-ದೇವರಾಜೇಗೌಡ, ದಕ್ಷಿಣ ಕನ್ನಡ-ಭರತ್ ಮುಂದೋಡಿ, ಬೆಳಗಾವಿ ಗ್ರಾಮೀಣ-ರಾಜಾಸಲೀಂ ಕಾಶಣ್ಣನವರ್, ಕಲಬುರಗಿ-ಅಶೋಕ್ ವೀರ್ ನಾಯ್ಕ್, ಚಿತ್ರದುರ್ಗ-ಆರ್.ಕೃಷ್ಣಮೂರ್ತಿ ಅವರನ್ನು ನೇಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Similar News