ಕೊಡ್ಲಿಪೇಟೆ: ಬೇಡಗೊಟ್ಟ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ

Update: 2023-01-20 09:21 GMT

ಕೊಡ್ಲಿಪೇಟೆ : ಸ್ಥಳೀಯ ಬೇಡಗೊಟ್ಟ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಜ.21 ಹಾಗೂ22ರಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 

21ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ  ಗ್ರಾಮೀಣ ಕ್ರೀಡಾಕೂಟ ಪೂರ್ವ ಮತ್ತು ಹಾಲಿ  ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಏರ್ಪಡಿಸಲಾಗಿದೆ.  ಉಚ್ಚ ನ್ಯಾಯಾಲಯದ ಹಿಂದಿನ ಸರಕಾರಿ ಅಭಿಯೋಜಕರಾದ ಹೆಚ್.ಎಸ್.ಚಂದ್ರಮೌಳಿ ರವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.

ಸಂಜೆ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಯುವ ಮುಖಂಡರಾದ ಡಾ.ಮಂಥರ್ ಗೌಡ ಉದ್ಘಾಟಿಸಲಿದ್ದಾರೆ.

ಜ.22ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ "ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆ": 

ದೊಡ್ಡಾಕುಂದ ಜೂನಿಯರ್ ಕಾಲೇಜು ವೃತ್ತದಿಂದ ಬೇಡಗೊಟ್ಟ ಶಾಲೆಯವರೆಗೆ ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆ ಸಾಗಲಿದೆ. ಮಧ್ಯಾಹ್ನ 2.30 ಗಂಟೆಗೆ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಶಿಕ್ಷಕರುಗಳಿಗೆ ಗೌರವ ಸನ್ಮಾನ ಮೂಲಕ ಗುರುವಂದನೆ ಸಲ್ಲಿಸಲಾಗುವುದು. ಬಳಿಕ ನಡೆಯುವ ಸಮಾರೋಪ ಸಮಾರಂಭವನ್ನು ಶಾಸಕ ಅಪ್ಪಚ್ಚುರಂಜನ್ ರವರು ಉದ್ಘಾಟಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ , ಆಯನೂರ್ ಮಂಜುನಾಥ್ ,ಭೋಜೆಗೌಡ ಮಾಜಿ ಸಚಿವ ಬಿ.ಎ.ಜೀವಿಜಯ ರಾಜಕೀಯ ಸಾಮಾಜಿಕ ಮುಖಂಡರಾದ ನಾಪಂಡ ಮುತ್ತಪ್ಪ ,ಹರಪಳ್ಳಿ ರವೀಂದ್ರ ,ಕೆ.ಹೆಚ್.ಅಬ್ದುಲ್ ಮಜೀದ್ ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸ್ಕತಿ ಇಲಾಖಾಧಿಕಾರಿಗಳು ,ಸ್ಥಳೀಯ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು , ಸೇರಿದಂತೆ ಅಥಿತಿ ಗಣ್ಯರು,ಸಮಾಜಿಕ ನೇತರರು,ದಾನಿಗಳು ,ಶಾಲಾಭಿವ್ರದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದ ಬಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಶಿಡಿಗಳಲೆ ಮಠದ ಶ್ರಿ ಇಮ್ನಡಿ ಶಿವಲಿಂಗ ಸ್ವಾಮಿಜಿಯವರ ಘನ ಉಪಸ್ಥಿತಿಯಲ್ಲಿ ವಿಘ್ನೆಶ್ವರ ಪ್ರೌಡಶಾಲೆಯ ಶಿಕ್ಷಕ ಝಹೀರ್ ನಿಝಾಮಿ ಮುಖ್ಯ ಭಾಷಣ ಮಾಡಲಿದ್ದಾರೆ.

ಸಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಎಂದು ಬೇಡಗೊಟ್ಟ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಡಿ.ಆರ್.ವೇದ್‌ಕುಮಾರ್ ಮತ್ತು ಸ್ವಾಗತ ಸಮಿತಿ ಸಂಚಾಲಕ ಗ್ರಾಮ ಪಂಚಾಯತ್ ಸದಸ್ಯ ಎಂ.ಎಂ ಹನೀಫ್  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News