ಕೇಂದ್ರ ಬಜೆಟ್: ಹೊಸ ತೆರಿಗೆ ಪದ್ದತಿಯಲ್ಲಿ 7ಲಕ್ಷ ದವರೆಗೆ ತೆರಿಗೆ ವಿನಾಯಿತಿ

ಬಂಗಾರ, ಬೆಳ್ಳಿ, ವಜ್ರ, ರೆಡಿಮೆಡ್ ಬಟ್ಟೆ ದುಬಾರಿ

Update: 2023-02-01 06:59 GMT

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಅವರು ಲೋಕಸಭೆಯಲ್ಲಿ 2023-24ರ ಸಾಲಿನ ಬಜೆಟ್ ಮಂಡನೆಯನ್ನು  ಬೆಳಗ್ಗೆ 11 ಗಂಟೆಗೆ ಆರಂಭಿಸಿದ್ದಾರೆ.ಅಮೃತ ಕಾಲದ ಮೊದಲ ಬಜೆಟ್ ಇದಾಗಿದೆ. ಭಾರತದ ಆರ್ಥಿಕತೆ ಸರಿದಾರಿಯಲ್ಲಿದೆ. ಉಜ್ವಲ ಭವಿಷ್ಯದತ್ತ ಸಾಗುತ್ತಿದೆ  ಎಂದು ಸೀತಾರಾಮನ್ ಮಾತು ಆರಂಭಿಸಿದರು.

ಬಜೆಟ್ ಮುಖ್ಯಾಂಶಗಳು

*ಹೊಸ ತೆರಿಗೆ ಪದ್ದತಿಯಲ್ಲಿಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ.

*ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ದುಬಾರಿ

*ರೆಡಿಮೆಡ್ ಬಟ್ಟೆ, ಸಿಗರೇಟು ದುಬಾರಿ

*ವಿದೇಶಿ ವಾಹನಗಳ ಆಮದು ದುಬಾರಿ

*ಹಸಿರು ಕೃಷಿ ಯೋಜನೆಗೆ ಪ್ರಧಾನಿ ಪ್ರಣಾಮ್ ಯೋಜನೆ: ಪರ್ಯಾಯ ರಸಗೊಬ್ಬರಗಳನ್ನು ಬಳಸುವಂತೆ ರಾಜ್ಯಗಳನ್ನು ಉತ್ತೇಜಿಸಲು ಪಿಎಂ-ಪ್ರಣಾಮ್ ಎಂಬ ಕಾರ್ಯಕ್ರಮ ಜಾರಿಗೆ ತರಲಾಗುವುದು.

*ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು

*ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ

 *ಆರ್ ಬಿಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ

*ಮಹಿಳಾ ಸಮ್ಮಾನ್ ಸೇವಿಂಗ್  ಪತ್ರ ಯೋಜನೆ ಜಾರಿ. ಈ ಯೋಜನೆಯಲ್ಲಿ 2 ಲಕ್ಷದವರಿಗೆ  ಠೇವಣಿಗೆ ಅವಕಾಶ

*ಹಿರಿಯ ನಾಗರಿಕರಿಗೆ 15ರಿಂದ 30 ಲಕ್ಷ ಠೇವಣಿಗೆ ಅವಕಾಶ

*100  ನಿರ್ಣಾಯಕ ಯೋಜನೆಗಳು: ಸಾರಿಗೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದ 100 ನಿರ್ಣಾಯಕ ಯೋಜನೆಗಳ ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ.

ವಾಣಿಜ್ಯ ವಿವಾದ ಪರಿಹಾರ ಕಾರ್ಯಕ್ರಮ

ವಾಣಿಜ್ಯ ವಿವಾದಗಳ ಇತ್ಯರ್ಥಕ್ಕೆ ವಿವಾದ್ ಸೆ ವಿಶ್ವಾಸ್-2 ಅಡಿಯಲ್ಲಿ ವಿವಾದ ಪರಿಹಾರ ಕಾರ್ಯಕ್ರಮ ತರಲು ಸರಕಾರ ತೀರ್ಮಾನ

*47 ಲಕ್ಷ ಯುವಕರಿಗೆ ಕಲಿಕಾ ವೇತನ

*ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಆ್ಯಪ್

* ಪ್ರವಾಸೋದ್ಯಮದ ಸಮಗ್ರ ಮಾಹಿತಿ ಇರುವ ಆ್ಯಪ್

*2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣ ಗುರಿ

*ಮಾಲಿನ್ಯ ನಿಯಂತ್ರಣಕ್ಕೆ ಸರಕಾರದ ಹಳೆ ವಾಹನಗಳು ಗುಜರಿಗೆ, ಹೊಸ ಸರಕಾರಿ ವಾಹನಗಳ ಖರೀದಿಗೆ ಕೇಂದ್ರದ  ಅನುದಾನ

*ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ

*ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರ ಮೇಲ್ದಂಡೆಗೆ 5300 ಕೋ.ರೂ.

ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋ.ರೂ. ಕೇಂದ್ರದ ನೆರವು

*ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ.66ಕ್ಕೆ(79,000 ಕೋಟಿ)ಹೆಚ್ಚಿಸಲಾಗಿದೆ

* ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,000 ಶಿಕ್ಷಕರ ನೇಮಕ

*ಕೃತಕಬುದ್ದಿಮತ್ತೆ ಸೆಂಟರ್ ಗಳ ಸ್ಥಾಪನೆ

*ಆರೋಗ್ಯ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಸೆಂಟರ್

*ನಗರೋತ್ಥಾನಕ್ಕಾಗಿ 10 ಸಾವಿರ ಕೋ.ರೂ. ಮೀಸಲು

*ಎಂಎಸ್ಎಂ ಇ ಯೋಜನೆಗಳಿಗೆ ವಿವಾದ್ ಸೆ ವಿಶ್ವಾಸ ಯೋಜನೆ

*ಸರಕಾರಿ ನೌಕರರಿಗಾಗಿ  ಮಿಷನ್ ಕರ್ಮಯೋಗಿ

*ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ

*ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ  ಸಾಗಣೆ

*ದೇಶದ ಎಲ್ಲ ನಗರಗಳು ಮ್ಯಾನ್ ಹೋಲ್ ನಿಂದ ಮುಕ್ತ ಗುರಿ

*ದೇಶದಲ್ಲಿ 50 ಹೊಸ ಏರ್ ಪೋರ್ಟ್ ಗಳ ನಿರ್ಮಾಣ

*ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲು

*ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ

*ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋ.ರೂ.

ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ

*ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು ನೀಡಲಾಗುವುದು. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು.

*157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ

*ಮೀನುಗಾರಿಕೆಗೆ 6000 ಕೋ.ರೂ. ಮೀಸಲು

*ಹಿಂದಿನ ಬಜೆಟ್‌ನಲ್ಲಿ ಹಾಕಿದ ಅಡಿಪಾಯದ ಮೇಲೆ ಬಜೆಟ್ ನಿರ್ಮಿಸಲು ಆಶಿಸುತ್ತೇವೆ. ಅಭಿವೃದ್ಧಿಯ ಫಲಗಳು ಎಲ್ಲಾ ವರ್ಗಗಳನ್ನು ತಲುಪುವ ಸಮೃದ್ಧ, ಅಂತರ್ಗತ ಭಾರತವನ್ನು ನಾವು ಕಲ್ಪಿಸುತ್ತೇವೆ .

*ಈ ಬಾರಿಯ ಬಜೆಟ್ ಸಪ್ತ ಅಂಶಗಳಿರುತ್ತವೆ. ಕೃಷಿಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ

ಮುಂದಿನ 1 ವರ್ಷಕ್ಕೆ ಎಲ್ಲಾ ಆದ್ಯತೆಯ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆ ಜಾರಿ:

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, 80 ಕೋಟಿಗೂ ಹೆಚ್ಚು ಜನರಿಗೆ 28 ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗುವುದಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ಮುಂದಿನ 1 ವರ್ಷಕ್ಕೆ ಎಲ್ಲಾ ಅಂತೋದಯ ಮತ್ತು ಆದ್ಯತೆಯ ಮನೆಗಳಿಗೆ ಜನವರಿ 1, 2023 ರಿಂದ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯನ್ನು ನಾವು ಜಾರಿಗೊಳಿಸುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

 ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆಯು ಶೇಕಡಾ 7 ರಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಭಾರತೀಯ ಆರ್ಥಿಕತೆಯು ಸವಾಲುಗಳ ನಡುವೆಯೂ ಸರಿಯಾದ ಹಾದಿಯಲ್ಲಿದೆ ಎಂದು ಅವರು ಹೇಳಿದರು.

Similar News