ಚಿಕ್ಕಮಗಳೂರು: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

Update: 2023-03-22 15:04 GMT

ಚಿಕ್ಕಮಗಳೂರು, ಮಾ.22: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎಪಿಎಂಸಿ ಬಳಿ ಬುಧವಾರ ವರದಿಯಾಗಿದೆ. 

ಮೃತರನ್ನು ನಗರದ ದಂಟರಮಕ್ಕಿ ನಿವಾಸಿ ಶ್ರೀಧರ್, ಹಿರೇಮಗಳೂರು ನಿವಾಸಿ ಧನಂಜಯ್ ಎಂದು ಗುರುತಿಸಲಾಗಿದೆ.  

ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. 

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

Similar News