ಕಾಂಗ್ರೆಸ್ಸಿಗರಿಂದ ನಕಲಿ ಪತ್ರ ಸೃಷ್ಟಿ: ಕೋಟ್ಯಾನ್ ಆರೋಪ

Update: 2023-04-20 17:42 GMT

ಮುಲ್ಕಿ:  ಬಳ್ಕುಂಜೆ, ಉಳೆಪಾಡಿ ಕೊಲ್ಲೂರು, ಅತಿಕಾರಿ ಬೆಟ್ಟು, ಕವತ್ತಾರು, ಬಜ್ಪೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಯೋಗ್ಯವಾದ ಒಂದು ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಜನರು ಸರಕಾರಕ್ಕೆ ಕೊಡಲು ಉತ್ಸುಕರಾಗಿ ದ್ದಾರೆ ಎಂದು ತಾನು ಸರಕಾರ ಹಾಗೂ ಕೆಐಡಿಬಿಗೆ ಪತ್ರ ಬರೆದಿರುವುದಾಗಿ ಕಾಂಗ್ರೆಸ್ಸಿಗರು ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.

ಕಿನ್ನಿಗೋಳಿಯ ಯುಗಪುರುಷದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್‌ರೈ ಪರಿಸರದ ಕೃಷಿಕರ ಅನುಕಂಪ ಗಿಟ್ಟಿಸಲು ಈ ರೀತಿಯ ನಕಲಿ ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಬಗ್ಗೆ ತನಿಖೆಗೆ ಆಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಸಂಸದರು ಮತ್ತು ಶಾಸಕರು ಭೂ ಸ್ವಾಧೀನ ಪ್ರದೇಶಗಳಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿ ರುವ ಮಿಥುನ್ ರೈ ಇದನ್ನು ಸಾಕ್ಷಿ ಸಮೇತ  ಹಾಗೂ ಆರೋಪದ ಮಾಡಿದವರ ವಿರುದ್ಧ ವಕೀಲರ ಮೂಲಕ ನ್ಯಾಯಾಲಯಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಈಶ್ವರ ಕಟೀಲು, ಸುನೀಲ್ ಆಳ್ವ, ಭುವನಾಭಿರಾಮ ಉಡುಪ ದಿವಾಕರ ಶೆಟ್ಟಿ ಐಕಳ, ದಿನೇಶ್ ಪುತ್ರನ್ ಕೇಶವ ಕರ್ಕೇರ ವಿಠಲ್ ಎನ್.ಎಂ. ಮತ್ತಿತರರು ಉಪಸ್ಥಿತರಿದ್ದರು.

Similar News