×
Ad

ನೆಲಮಂಗಲ ಹಾಸನ ಟೋಲ್‌ನಲ್ಲಿ ವಾಹನ ಸವಾರರಿಗೆ ಬರೆ; ನಾಳೆಯಿಂದ ಟೋಲ್ ದರ ಏರಿಕೆ

Update: 2025-08-31 18:11 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಆ.31: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ಬಾರಿ ದರ ಏರಿಕೆ ಬಿಸಿ ತಟ್ಟಲಿದ್ದು, ಇಲ್ಲಿನ ಬೆಂಗಳೂರು ಹೊರವಲಯ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೆಪ್ಟೆಂಬರ್ 1 ರಿಂದ ದರ ಏರಿಕೆ ಆಗಲಿದೆ.

ರವಿವಾರ (ಸೆ.1) ಮಧ್ಯರಾತ್ರಿಯಿಂದಲೇ ಹೆಚ್ಚುವರಿ 5 ರೂ. ದರ ಏರಿಕೆಯಾಗಲಿದೆ. ಇದು ನೆಲಮಂಗಲ ದೇವಿಹಳ್ಳಿ ವ್ಯಾಪ್ತಿಯ ಎ.ಪ್ರೈ.ಲಿಮಿಟೆಡ್ ಟೋಲ್‍ಗಳಿಗೆ ಅನ್ವಯವಾಗಲಿದೆ. ಇದರಿಂದ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬರೆ ಬಿದ್ದಿದೆ.

ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದ್ದು, ಏಕಮುಖ ಸಂಚಾರಕ್ಕೆ 5 ರೂ., ದ್ವಿಮುಖ ಸಂಚಾರಕ್ಕೆ 10 ರೂ. ದರ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯಿಂದ ವಾಹನ ಮಾಲಕರ ಜೇಬಿಗೆ ಕತ್ತರಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News