ಭಿನ್ನಾಭಿಪ್ರಾಯದ ನಡುವೆ ಸಮುದಾಯಕ್ಕೆ ಕಷ್ಟ ಬಂದಾಗ ಎಲ್ಲರೂ ಒಟ್ಟಿಗೆ ನಿಲ್ಲಬೇಕು : ಕೆ.ಎಚ್.ಮುನಿಯಪ್ಪ
Update: 2025-08-31 20:31 IST
ಬೆಂಗಳೂರು, ಆ.31: ರಾಜಕೀಯದಲ್ಲಿ ಪಕ್ಷದ ಸೈದ್ಧಾಂತಿಕ ವಿಚಾರವಾಗಿ ಭಿನ್ನಾಭಿಪ್ರಾಯ ಇರಬಹುದು. ಆದರೆ, ಸಮುದಾಯಕ್ಕೆ ಕಷ್ಟ ಬಂದಾಗ ಎಲ್ಲ ನಾಯಕರೂ ಒಟ್ಟಿಗೆ ನಿಲ್ಲಬೇಕು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಕರೆ ನೀಡಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ರಾಜ್ಯ ಮಾದಿಗ ಅಧಿಕಾರಿ ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ‘ಒಳ ಮೀಸಲಾತಿ-ಮುಂದಿನ ಹೆಜ್ಜೆಗಳು’ ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸರಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಸಮುದಾಯದ ಪರವಾಗಿ ಬದ್ಧತೆ ತೋರಿದೆ. 35-40 ವರ್ಷಗಳಿಂದ ನಡೆದ ಹೋರಾಟಗಳ ಫಲವಾಗಿ ಇಂದಿನ ಹಕ್ಕುಗಳು ದೊರೆತಿವೆ. ಇನ್ನು ಮುಂದೆ ನಾವೆಲ್ಲರೂ ಮಾದಿಗ ಸಮುದಾಯದ ಮುಂದಿನ ಪೀಳಿಗೆಗೆ ಉದ್ಯೋಗ, ಶಿಕ್ಷಣ ಹಾಗೂ ಉದ್ಯಮದ ಅವಕಾಶಗಳನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಬೇಕಿದೆ ಎಂದು ಅವರು ತಿಳಿಸಿದರು.