×
Ad

ಪ್ಯಾರಾಲಿಂಪಿಕ್ ವಿಜೇತನಿಗೆ ಬಹುಮಾನ ಹಣ ಬಿಡುಗಡೆ ಮಾಡದ ವಿಚಾರ : ಅಧಿಕಾರಿಗಳಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Update: 2025-07-22 17:57 IST

ಬೆಂಗಳೂರು : ಎರಡೂ ಕೈಗಳನ್ನು ಕಳೆದುಕೊಂಡ ಈಜುಗಾರ, ಪ್ಯಾರಾಲಿಂಪಿಕ್ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ವಿಜೇತನಿಗೆ ನೀಡಬೇಕಿದ್ದ 1.26 ಲಕ್ಷ ರೂ. ಪಾವತಿ ಮಾಡಲು ವಿಳಂಬ ಮಾಡಿದ್ದಕ್ಕೆ ಅಧಿಕಾರಿಗಳಿಗೆ 2 ಲಕ್ಷ ರೂ.ಗಳ ದಂಡ ವಿಧಿಸಿ ಹೈಕೋರ್ಟ್ ಆದೇಶಿದೆ.

ತಮಗೆ ನೀಡಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಕ್ರೀಡಾ ಇಲಾಖೆಗೆ ಆದೇಶಿಸುವಂತೆ ಪ್ಯಾರಾಲಿಂಪಿಕ್ ಸ್ಪರ್ಧಿ ಕೆ.ಎಸ್.ವಿಶ್ವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರಿಗೆ ನೀಡಬೇಕಿರುವ ಹಣವನ್ನು ಎರಡು ವಾರಗಳಲ್ಲಿ ಪಾವತಿಸಲು ನಿರ್ದೇಶನ ನೀಡಿದೆ.

ಒಂದು ವೇಳೆ ಎರಡು ವಾರದಲ್ಲಿ ಪಾವತಿ ಮಾಡದಿದ್ದರೆ ಎರಡು ವಾರಗಳ ಬಳಿಕ ಅರ್ಜಿದಾರರಿಗೆ ಪತ್ರಿನಿತ್ಯ 1 ಸಾವಿರ ಹಣವನ್ನು ಹೆಚ್ಚುವರಿಯಾಗಿ ಪಾವತಿಸಿಲು ಷರತ್ತು ವಿಧಿಸಿದೆ. ದಂಡದ ಮೊತ್ತವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಪ್ಪಿತಸ್ಥ ಅಧಿಕಾರಿ ತನ್ನ ಜೇಬಿನಿಂದಲೇ ಪಾವತಿಸಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಅರ್ಜಿದಾರ ವಿಶ್ವಾಸ್ 2016 ರಿಂದ 2018ರವರೆಗಿನ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗಳಿಸಿದ್ದಾರೆ‌. ಸಾಧನೆಗೆ ಸರಕಾರವೇ ಘೋಷಿಸಿದ ನಗದು ಬಹುಮಾನದ ಬಾಕಿಯನ್ನು ಆರು ವರ್ಷಗಳು ಕಳೆದರೂ ನೀಡಿಲ್ಲ. ಅದರಲ್ಲಿ ಒಂದು ರೂಪಾಯಿಯನ್ನೂ ಪಾವತಿ ಮಾಡದೇ ಅಲೆದಾಡಿಸುತ್ತಿರುವುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗಿದೆ ಎಂದು ಆದೇಶದಲ್ಲಿ ಅಧಿಕಾರ ನಡೆಗೆ ಬೇಸರ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News