ಕಿನ್ನಿಗೋಳಿ: ಮಿಸ್ಟಾಹುಲ್ ಮದೀನ ತ-ಅಲೀಮಿಯಲ್ಲಿ ಮಿಸ್ಟಾಫೆಸ್ಟ್ 2025
ಕಿನ್ನಿಗೋಳಿ: ಮಿಸ್ಟಾಹುಲ್ ಮದೀನ ತ-ಅಲೀಮಿ ಕಲ್ಕರೆ ಕಿನ್ನಿಗೋಳಿ ಇದರ ವತಿಯಿಂದ ಅಜ್ಮೀರ್ ಮೌಲಿದ್ ಮಜ್ಲಿಸ್, ಉಲಮಾ ಮತ್ತು ಮುತಅಲ್ಲಿಂ ಸಂಗಮ ಹಾಗೂ ಮಿಸ್ಟಾಫೆಸ್ಟ್ 2025 ಕಾರ್ಯಕ್ರಮವು ಜ.18ರಿಂದ 21ರ ವರೆಗೆ ಕಲ್ಕರೆ ಮಸೀದಿಯ ವಠಾರದಲ್ಲಿ ಜರುಗಲಿದೆ.
ಜ.19ರಂದು ನಡೆಯಲಿರುವ ಮಿಸ್ಟಾಫೆಸ್ಟ್ 2025ನ್ನು ಕಲ್ಕರೆ ಮಿಸ್ಬಾಹುಲ್ ಮದೀನದ ಮ್ಯಾನೇಜರ್ ಹಸನ್ ಸಖಾಫಿ ಅಲ್ ಫುರ್ ಖಾನಿ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ಪೊಸೋಟು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಜ.21ರ ಮಂಗಳವಾರ ಬೆಳಗ್ಗೆ 7ಗಂಟೆಗೆ ಅಸ್ಸಯ್ಯಿದ್ ಶಾಹುಲ್ ಹಮೀದ್ ಅಲ್ ಬುಖಾರಿ ಉಪ್ಪಳ ಅವರ ನೇತೃತ್ವದಲ್ಲಿ ಖತಮುಲ್ ಖುರ್‌ಆನ್ ಮಜ್ಲಿಸ್, ಬೆಳಗ್ಗೆ 8ಗಂಟೆಗೆ ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮತ್ತು ಕಲ್ಕರೆ ಮಿಸ್ಟಾಹುಲ್ ಮದೀನದ ಪ್ರಾಂಶುಪಾಲರಾದ ಎ.ಪಿ.ಅಬ್ದುಲ್ಲಾ ಮದನಿ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ಮಜ್ಲಿಸ್ ನೆರವೇರಲಿದೆ. ಬೆಳಗ್ಗೆ 9ಗಂಟೆಗೆ ಮಲಪ್ಪುರಂ ಮಂಜೇರಿಯ ಜಾಮಿಯ ಹಿಕಮಿಯ್ಯಾ ಮುದರ್ರಿಸ್ ಇಬ್ರಾಹೀಂ ಸಖಾಫಿ ಪುಝಕಾಟೀರ ಮಲಪ್ಪುರ ಇವರ ನೇತೃತ್ವದಲ್ಲಿ ಉಲಮಾ ಹಾಗೂ ಮುತಅಲ್ಲಿಂ ಸಂಗಮ ನಡೆಯಲಿದೆ.
ಉಕ್ಕುಡ ಮುದರ್ರಿಸ್ ಹಾಫಿಲ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ, ಕೈಕಂಬ ಮರ್ಕಝ್ ಚೆರ್ ಮೆನ್ ಬದ್ರುದ್ದೀನ್ ಅಝ್ ಹರಿ ಅಲ್ ಫುರ್ಖಾನಿ, ಮಜೀದ್ ಫಾಳಿಲಿ ಗಾಣಿಮಾರ್, ಅಶ್ರಫ್ ಸ ಅದಿ ಮಲ್ಲೂರು, ನವಾಝ್ ಸಖಾಫಿ, ಫಾರೂಕ್ ಸಖಾಫಿ, ಕನ್ನಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ , ಮೂಳೂರು ಮುದರ್ರಿಸ್ ಅಶ್ರಫ್ ಸಖಾಫಿ ಕಕ್ಕಿಂಜೆ, ಬಶೀರ್ ಮದನಿ ಕೂಳೂರು, ಇಬ್ರಾಹೀಂ ಮುಸ್ಲಿಯಾರ್ ಶಾರ್ಜಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಿಸ್ಟಾಹುಲ್ ಮದೀನ ತ-ಅಲೀಮಿ ಕಲ್ಕರೆಯ ಪ್ರಕಟನೆ ತಿಳಿಸಿದೆ.