200 ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ 2025 - 26ನೇ ಸಾಲಿನ 'ಡಿಜಿ-ಐಜಿಪಿ ಪ್ರಶಂಸನಾ ಪದಕ' ಘೋಷಣೆ
Update: 2026-06-23 12:09 IST
ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ
ಬೆಂಗಳೂರು: ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ 200 ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ 2025 - 26ನೇ ಸಾಲಿನ 'ಡಿಜಿ-ಐಜಿಪಿ ಪ್ರಶಂಸನಾ ಪದಕ' ಘೋಷಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಸೋಮವಾರ ಆದೇಶ ಹೊರಡಿಸಿದ್ದಾರೆ.
ಐಜಿಪಿ ಎನ್.ಸತೀಶ್ ಕುಮಾರ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಿಐಡಿ ಡಿಐಜಿ ಡಾ.ಭೀಮಾಶಂಕರ್ ಗುಳೇದ್, ಡಿಐಜಿ ಶಾಂತನು ಸಿನ್ಹಾ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳಿಗೂ ಪದಕ ಗೌರವ ಲಭಿಸಿದೆ.
ರಾಜ್ಯದ ವಿವಿಧೆ ಕಾರ್ಯನಿರ್ವಹಿಸುತ್ತಿರುವ ಎಸ್ಪಿ, ಎಸಿಪಿ/ ಡಿವೈಎಸ್ಪಿಗಳು, ಕೆಎಸ್ಆರ್ ಪಿ ಕಮಾಂಡೆಂಟ್ ಗಳು, ಇನ್ ಸ್ಪೆಕ್ಟರ್ ಗಳು, ಪಿಎಸ್ಸೈ, ಎಎಸ್ಸೈ ಹಾಗೂ ಕಾನ್ ಸ್ಟೇಬಲ್ ಹಂತದವರೆಗೆ 200 ಮಂದಿಗೆ ಪದಕ ಘೋಷಿಸಲಾಗಿದೆ.