×
Ad

ಬಜೆಟ್‌ನಲ್ಲಿ ಮಾಸಿಕ ಗೌರವಧನ ಹೆಚ್ಚಿಸುವಂತೆ ಅಂಗನವಾಡಿ ನೌಕರರು ಧರಣಿ

Update: 2025-02-13 22:49 IST

ಬೆಂಗಳೂರು : 2025-26ನೇ ಸಾಲಿನ ಬಜೆಟ್ನಲ್ಲಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ., ಮಾಸಿಕ ಗೌರವಧನ ಹೆಚ್ಚಿಸುವುದು ಸೇರಿ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇಸಿರುವಂತೆ ಒತ್ತಾಯಿಸಿ, ಗುರುವಾರ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಅಂಗನವಾಡಿ ನೌಕರರು ಧರಣಿ ನಡೆಸಿದರು.

ನ್ಯಾಯಾಲಯದ ಆದೇಶದಂತೆ ಅಂಗನವಾಡಿ ನೌಕರರನ್ನು `ಸಿ' ಮತ್ತು `ಡಿ' ಗ್ರೂಪ್ ನೌಕರರೆಂದು ಪರಿಗಣಿಸಿ ಆದೇಶ ಮಾಡಬೇಕು. ಗ್ರ್ಯಾಚೂಟಿ ಹಣವನ್ನು ನಿವೃತ್ತಿಯಾದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿರಿಗೆ ಕೂಡಲೇ ಪಾವತಿಸಬೇಕು. ಭರವಸೆ ನೀಡಿದಂತೆ 2ಲಕ್ಷ ರೂ. ನಿವೃತ್ತಿ ಪರಿಹಾರವನ್ನು ಘೋಷಿಸಬೇಕು, ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಸಹಾಯಧನ ಪಾವತಿಸುವುದು ಸೇರಿ ಇತರ ಬೇಡಿಕೆಗಳನ್ನಿಟ್ಟುಕೊಂಡು ಅಂಗನವಾಡಿ ನೌಕರರು ಹೋರಾಟ ನಡೆಸಿದರು.

ಶಾಸಕರು, ಸಂಸದರುಗಳು ತಮ್ಮ ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ದುಡಿಯುವ ಮಹಿಳೆಯರ ಸಂಬಳ ಹೆಚ್ಚಿಸುತ್ತಿಲ್ಲ ಇದು ಅಕ್ಷಮ್ಯವಾದುದು. ಸರ್ವೋಚ್ಚ ನ್ಯಾಯಾಲಯ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯೂ ಅಂಗನವಾಡಿ ಕಾರ್ಯಕರ್ತೆಯರ ಖಾಯಮಾತಿಗೆ ಆಗ್ರಹಿಸಿವೆ. ಆದರೆ ಇದನ್ನೂ ನಮ್ಮ ಸರಕಾರಗಳು ಪಾಲಿಸುತ್ತಿಲ್ಲ ಎಂದು ಅಂಗನವಾಡಿ ನೌಕರರು ಬೇಸರ ವ್ಯಕ್ತಪಡಿಸಿದರು.

ಧರಣಿಯಲ್ಲಿ ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಶಾಂತಾ ಎ., ಮಲ್ಲಿಕಾರ್ಜುನ ಹೆಚ್.ಟಿ, ಭುವನ, ಹನುಮೇಶ ಜಿ, ಡಿ ಉಮಾದೇವಿ, ನಿಂಗಮ್ಮ ಮಠ ಸೇರಿ ವಿವಿಧ ಜಿಲ್ಲೆಗಳ ಅಂಗನವಾಡಿ ನೌಕರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News