×
Ad

ಬೆಂಗಳೂರು | ಸಂಸದೆ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಢಿಕ್ಕಿ‌ : ಸವಾರ ಮೃತ್ಯು

Update: 2024-04-08 14:55 IST

ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರಿಗೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಮೃತಪಟ್ಟಿರುವ ಘಟನೆ ಕೆ.ಆರ್.ಪುರದಲ್ಲಿ ಸೋಮವಾರ ವರದಿಯಾಗಿದೆ.

ಮೃತ ಬೈಕ್‌ ಸವಾರನ್ನು ಪ್ರಕಾಶ್(35) ಎಂದು ಗುರುತಿಸಲಾಗಿದೆ. ಎ.8ರ ಸೋಮವಾರ ಬೆಳಗ್ಗೆ ಪ್ರಚಾರಕ್ಕಾಗಿ ಕೆ.ಆರ್.ಪುರ ಕ್ಷೇತ್ರಕ್ಕೆ ಬಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ದೇವಸ್ಥಾನದ ಬಳಿ ತಮ್ಮ ಫಾರ್ಚೂನರ್ ಕಾರನ್ನು ನಿಲ್ಲಿಸಿದ್ದರು. ಕಾರಿನ ಬಾಗಿಲು ತೆಗೆದಾಗ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬರುತ್ತಿದ್ದ ಪ್ರಕಾಶ್ ಢಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.

ಈ ಸಂದರ್ಭ ಪ್ರಕಾಶ್‌ನ ಹಿಂದೆ ಬರುತ್ತಿದ್ದ ಬಸ್ ಆತನ ದೇಹದ ಮೇಲೆ ಹರಿದಿದೆ ಎಂಂದು ಹೇಳಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

 ಘಟನೆ ಸಂಬಂಧ ನಗರದ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News