×
Ad

ಬೆಂಗಳೂರು| ಚಲನಚಿತ್ರ ನಿರ್ದೇಶಕ ವಿಶಾಲ್ ರಾಜ್ ಪುತ್ರ ಸಾಯಿ ನಿತಿನ್ ರಾಜ್ ನಿಧನ

ಮೃತದೇಹ ಹಸ್ತಾಂತರಿಸಲು 18 ಲಕ್ಷ ರೂ. ಬೇಡಿಕೆ ಇಟ್ಟ ಆಸ್ಪತ್ರೆ ಅಧಿಕಾರಿಗಳು : ಆರೋಪ

Update: 2025-11-27 14:55 IST

ಬೆಂಗಳೂರು: ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ವಿಶಾಲ್ ರಾಜ್ ಅವರ ಮಗ ಸಾಯಿ ನಿತಿನ್ ರಾಜ್ ನಿಧನರಾಗಿದ್ದಾರೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಮಗನನ್ನು ವಿಶಾಲ್ ರಾಜ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ನಿತಿನ್ ರಾಜ್ ಮೃತಪಟ್ಟಿದ್ದಾರೆ.

ಮಗನ ಚಿಕಿತ್ಸೆಗಾಗಿ ವಿಶಾಲ್ ರಾಜ್ ಇಲ್ಲಿವರೆಗೂ 40 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಇದೀಗ ಇನ್ನೂ18 ಲಕ್ಷ ರೂ. ಹಣ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯವರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವಿಶಾಲ್ ರಾಜ್, ನನಗೆ ನನ್ನ ಮಗನ ಮೃತದೇಹವೂ ಬೇಡ, ನಾನು ದುಡ್ಡೂ ಕಟ್ಟಲ್ಲ, ನೀವೇ ತಗೊಳ್ಳಿ ಅಂತ ಆಸ್ಪತ್ರೆ ಮುಂದೆ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಧ ನೆಪ ಹೇಳಿ ಇಲ್ಲಿಯವರೆಗೂ 40 ಲಕ್ಷ ವಸೂಲಿ ಮಾಡಿರುವ ಆಸ್ಪತ್ರೆ ಸಿಬ್ಬಂದಿ, ಕೋಮಾದಲ್ಲಿದ್ದ ರೋಗಿಯನ್ನು ಆಪರೇಷನ್ ಮಾಡಿರುವ ವೈದ್ಯರು ಇನ್ನು 18 ಲಕ್ಷ ವಸೂಲಿಗೆ ಇಳಿದಿರುವುದು ಅಮಾನವೀತೆಯ ಪರಮಾವಧಿ ಎಂಬ ಆರೋಪ ಕೇಳಿ ಬಂದಿದೆ.

ಕೆಎಂಸಿ ನಿಯಮದ ಪ್ರಕಾರ ರೋಗಿ ನಿಧನವಾದ 2 ಗಂಟೆಯ ಒಳಗೆ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಬೇಕು. ಹಣವನ್ನು ಕಾನೂನು ಮುಖೇನ ಸಹಿ ಮಾಡಿರುವ ವಾರಸುದಾರರಿಂದ ವಸೂಲಿ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News