×
Ad

ಬೆಂಗಳೂರು | ಮಣಿಪುರ ಮೂಲದ ಯುವತಿಗೆ ಲೈಂಗಿಕ ಕಿರುಕುಳ ಆರೋಪ : ನಾಲ್ವರು ಅಪ್ರಾಪ್ತರ ಸೆರೆ

Update: 2024-02-24 18:38 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಣಿಪುರ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆಯ ಸ್ನೇಹಿತನಿಗೂ ಹಲ್ಲೆ ಮಾಡಿರುವ ಆರೋಪದಡಿ ನಾಲ್ವರು ಅಪ್ರಾಪ್ತರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫೆ. 18ರಂದು ರಾತ್ರಿ ನಗರದ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾದೇಶಿಕ ಪಾಸ್‍ ಪೋರ್ಟ್ ಸೇವಾ ಕೇಂದ್ರದ ಬಳಿ ಘಟನೆ ನಡೆದಿತ್ತು. 25 ವರ್ಷದ ದೂರುದಾರ ಯುವತಿ ಹಾಗೂ ಆಕೆಯ ಸ್ನೇಹಿತ ರಾತ್ರಿ 1 ಗಂಟೆ ಸುಮಾರಿಗೆ ಕಸ ಎಸೆಯಲು ತೆರಳಿದ್ದರು. ಈ ವೇಳೆ ಎದುರಾಗಿದ್ದ ಆರೋಪಿಗಳು ಯುವತಿಯ ಖಾಸಗಿ ಭಾಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ.

ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮರದ ಕಟ್ಟಿಗೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಆಕೆಯ ನೆರವಿಗೆ ಬಂದ ಸ್ನೇಹಿತನಿಗೂ ಥಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ನೊಂದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News