×
Ad

ಬೆಂಗಳೂರು | ಟ್ರಕ್ ಮೂಲಕ ಸಾಗಿಸುತ್ತಿದ್ದ ಗಾಂಜಾವನ್ನು ಜಪ್ತಿ ಮಾಡಿದ ಎನ್‍ಸಿಬಿ ; ಇಬ್ಬರ ಬಂಧನ

Update: 2024-05-13 21:28 IST

ಬೆಂಗಳೂರು : ಟ್ರಕ್ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಮಾದಕ ಪದಾರ್ಥವನ್ನು ಬೆಂಗಳೂರು ವಲಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.

ಸುಮಾರು 774 ಪೊಟ್ಟಣಗಳಲ್ಲಿ ತುಂಬಿದ್ದ 1591 ಕೆ.ಜಿ. ತೂಕದ ಗಾಂಜಾವನ್ನು ಬೀದರ್ ಜಿಲ್ಲೆಯ ಔರಾದ್‍ನ ವನ್ಮಾರಪಲ್ಲಿ ಚೆಕ್‍ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಎನ್‍ಸಿಬಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಟ್ರಕ್ ವಶಕ್ಕೆ ಪಡೆದಿರುವುದಾಗಿ ಎನ್‍ಸಿಬಿ ಹೇಳಿದೆ.

ಕಳೆದ 2 ತಿಂಗಳ ಅವಧಿಯಲ್ಲಿ ಜಪ್ತಿ ಮಾಡಲಾದ ಮಾದಕ ಪದಾರ್ಥಗಳ ಪೈಕಿ ಎರಡನೇ ಅತಿದೊಡ್ಡ ಕಾರ್ಯಾಚರಣೆ ಎಂದು ಎನ್‍ಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News