×
Ad

ಬಿಜೆಪಿಗರಿಗೆ ಎಸ್‍ಐಆರ್ ಫಾರಂ ಸಿಗದಂತೆ ನೋಡಿಕೊಳ್ಳುವ ಸಾಧ್ಯತೆ : ಬಸವರಾಜ ಬೊಮ್ಮಾಯಿ

Update: 2026-06-30 21:14 IST

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತ ಅರ್ಜಿ(ಫಾರಂ) ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಂಗಳವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಮೊದಲನೆ ಹಂತದಲ್ಲಿ ಬಿಎಲ್‍ಒಗಳು ಮನೆ ಮನೆಗೆ ಬಂದು ಫಾರ್ಮ್ 6 ವಿತರಣೆ ಮಾಡುವ ಕಾರ್ಯಕ್ರಮ ಆರಂಭವಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರಕಾರ ಅರ್ಜಿ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ನಮ್ಮ ಪಕ್ಷದ ಎಲ್ಲ ಬಿಎಲ್‍ಎಗಳು ಅತ್ಯಂತ ಜಾಗೃತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಮೊದಲನೆ ಹಂತದ ಈ ಕಾರ್ಯಕ್ರಮ ನಡೆಸುತ್ತಿರುವುದು ರಾಜ್ಯ ಸರಕಾರದ ಅಧಿಕಾರಿಗಳು. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರವಾಗಿ ಹೇಳಿಕೆ ಕೊಡುತ್ತಿರುವುದು ನೋಡಿದಾಗ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒತ್ತಡ ಹಾಕುತ್ತಿದ್ದಾರೆ. ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ನಮ್ಮ ಬಿಎಲ್‍ಎ ಗಳು ಅತ್ಯಂತ ಜಾಗೃತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಅರ್ಜಿ ನಮೂನೆ 6 ಹಂಚುವಿಕೆ, ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವುದು, ಅನರ್ಹ ಮತದಾರರ ಹೆಸರು ಸೇರಿಸದಂತೆ ನೋಡುವುದು ಮುಂದಿನ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರು ಕರೆ ನೀಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News