ಬೆಂಗಳೂರು | ನಿಧಿ ಪೂಜೆಯ ನೆಪದಲ್ಲಿ ಸುಲಿಗೆ: ವ್ಯಕ್ತಿಯ ಬಂಧನ
Update: 2025-10-14 19:44 IST
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.14: ನಿಧಿ ಪೂಜೆ ನೆಪದಲ್ಲಿ ಸಾರ್ವಜನಿಕರನ್ನು ನಂಬಿಸಿ ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಪಟ್ಟಣದ ನಿವಾಸಿ ದಾದಾಪೀರ್(49) ಬಂಧಿತ ಆರೋಪಿ ಆಗಿದ್ದು, ಈತನಿಂದ 53 ಲಕ್ಷ ರೂ. ಮೌಲ್ಯದ 485 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತು ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ನಿಧಿ ಇದೆ ಮನೆಗೆ ಹೋಗಿ ನಿಮಲ್ಲಿರುವ ಎಲ್ಲ ಆಭರಣಗಳನ್ನು ಪೂಜೆಗಿಡುವಂತೆ ಸೂಚಿಸುತ್ತಿದ್ದನು. ಬಳಿಕ ಆಭರಣ ಜತೆ ಪರಾರಿ ಆಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಆರೋಪಿಯಿಂದ 53 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.