×
Ad

Bengaluru | ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದವರ ಮೇಲೆ ಸಿಸಿಬಿ ದಾಳಿ: 23 ಮಂದಿ ಬಂಧನ, ನಗದು ಸಹಿತ 13 ಕೋಟಿ ಮೌಲ್ಯದ ಮಾಲು ವಶ

Update: 2026-05-26 19:57 IST

ಸಾಂದರ್ಭಿಕ ಚಿತ್ರ | Photo Credit : magnific.com

ಬೆಂಗಳೂರು : ಐಪಿಎಲ್ ಪಂದ್ಯಾವಳಿಯ ವೇಳೆ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದವರ ವಿರುದ್ಧ ಸಿಸಿಬಿಯ ವಿಶೇಷ ದಳದ ಪೊಲೀಸರು ನಗರದಲ್ಲಿ ವಿವಿಧೆಡೆ ದಾಳಿ ಕೈಗೊಂಡು 17 ಪ್ರಕರಣಗಳನ್ನು ದಾಖಲಿಸಿ 23 ಆರೋಪಿಗಳನ್ನು ಬಂಧಿಸಿದ್ದು, 13 ಕೋಟಿ ರೂ. ಮೌಲ್ಯದ ಹಣ, ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿಬಿ ಪೊಲೀಸ್ ಠಾಣೆಯಲ್ಲಿ 9 ಪ್ರಕರಣ ಸಹಿತ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಪ್ರಮುಖ 4 ಪ್ರಕರಣಗಳಲ್ಲಿ ಬಂಧಿತ ಐವರು ಆರೋಪಿಗಳಿಂದ 1.10 ಲಕ್ಷ ರೂ. ಮೌಲ್ಯದ 7 ಮೊಬೈಲ್‍ಗಳು, 1,06,433 ರೂ. ನಗದು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 17 ಪ್ರಕರಣಗಳಲ್ಲಿ 13,37,36,911 ರೂ. ಮೌಲ್ಯದ ಹಣ, ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅಪರ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಮತ್ತು ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇನ್‍ಸ್ಪೆಕ್ಟರ್ ಒಳಗೊಂಡ ತಂಡ ಈ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News