Bengaluru | 290 ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರಿಂದ ದಾಳಿ, 107 ವಾಹನಗಳ ಜಪ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪೂರ್ವ ಹಾಗೂ ಉತ್ತರ ವಿಭಾಗದ ಪೊಲೀಸರು ಸುಮಾರು 290 ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ, 105 ದ್ವಿಚಕ್ರ ವಾಹನ ಹಾಗೂ 2 ಆಟೋರಿಕ್ಷಾ ಸೇರಿದಂತೆ ಒಟ್ಟು 107 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಅಸಾಮಾಜಿಕ ಮತ್ತು ಸುಸಜ್ಜನೆ ಕಾಪಾಡುವ ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇ ಶದಿಂದ ಪೂರ್ವ ವಿಭಾಗದ ಕೆ.ಜೆ.ಹಳ್ಳಿ ಉಪ ವಿಭಾಗ, ಪುಲಕೇಶಿನಗರ ಉಪ ವಿಭಾಗ ಹಾಗೂ ಉತ್ತರ ವಿಭಾಗದ ಜೆ.ಸಿ.ನಗರ ಉಪ ವಿಭಾಗದ ಪೊಲೀಸರು ಜಂಟಿಯಾಗಿ ಗಡಿ ಪ್ರದೇಶದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದರು.
ವಿಶೇಷ ಕಾರ್ಯಾಚರಣೆ ವೇಳೆ 290 ರೌಡಿ ಶೀಟರ್‍ಗಳ ಮನೆಗೆ ದಾಳಿ ನಡೆಸಿ 105 ದ್ವಿಚಕ್ರ ವಾಹನ ಹಾಗೂ 2 ಆಟೋರಿಕ್ಷಾ ಸೇರಿದಂತೆ ಒಟ್ಟು 107 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಹಳೆ ಅಪರಾಧಿಗಳು ಹಾಗೂ ರೌಡಿಶೀಟರ್‍ಗಳ ಸದ್ಯದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ ಮತ್ತು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.