Bengaluru | ನಿಂತ ವಾಹನಕ್ಕೆ ಡೀಸೆಲ್ ಹಾಕುತ್ತಿದ್ದಾಗ ಲಾರಿ ಹರಿದು ಚಾಲಕ ಮೃತ್ಯು

Update: 2026-08-04 19:05 IST

ಬೆಂಗಳೂರು : ರಸ್ತೆಯಲ್ಲಿ ನಿಂತಿದ್ದ ಈಚರ್ ಗೂಡ್ಸ್ ವಾಹನಕ್ಕೆ ಡೀಸೆಲ್ ತಂದು ಹಾಕುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಹರಿದು ಚಾಲಕ ಮೃತಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಈಚರ್ ಗೂಡ್ಸ್ ವಾಹನ ಚಾಲಕ ಅಜಿತ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಮಧ್ಯರಾತ್ರಿ 12ರ ವೇಳೆ ಅಜಿತ್ ಈಚರ್ ಗೂಡ್ಸ್ ವಾಹನ ಚಲಾಯಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ ಬಳಿ ಹೋಗುವಾಗ ರಸ್ತೆಯಲ್ಲಿ ಡೀಸೆಲ್ ಖಾಲಿಯಾಗಿ ವಾಹನ ನಿಂತಿದ್ದರಿಂದ ಚಾಲಕ ಅಜಿತ್ ಹತ್ತಿರದ ಪೆಟ್ರೋಲ್ ಬಂಕ್ ನಿಂದ ಕ್ಯಾನ್ ನಲ್ಲಿ ಡಿಸೇಲ್ ತೆಗೆದುಕೊಂಡು ಬಂದಿದ್ದಾರೆ. ಡೀಸೆಲ್ ಹಾಕುತ್ತಿದ್ದಾಗ, ವೇಗವಾಗಿ ಬಂದ ಕಂಟೇನರ್ ಲಾರಿ ಹರಿದು ಮೃತಪಟ್ಟಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೆÇಲೀಸರು ಕಂಟೇನರ್ ಲಾರಿ ಚಾಲಕನ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

(ಅನಿಲ್)

..................

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News