×
Ad

ಬೆಂಗಳೂರು: ನೀರಿನ ಸಂಪ್‍ಗೆ ಬಿದ್ದು ಮಗು ಮೃತ್ಯು

Update: 2023-12-22 18:41 IST

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದು ನೀರಿನ ಸಂಪ್‍ಗೆ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬಾಗಲಗುಂಟೆಯ ಸೈಯದ್ ಹುಸೇನ್ ಪುತ್ರಿ ಸಾಯಿದಾ(5) ಮೃತ ಮಗು. ಡಿ.20ರ ಸಂಜೆ 5 ಗಂಟೆ ಸುಮಾರಿಗೆ ಮನೆ ಎದುರು ಆಟವಾಡುವಾಗ ಬಾಗಿಲು ತೆರೆದಿದ್ದ ಸಂಪ್‍ಗೆ ಬಿದ್ದು ನೀರಿನಲ್ಲಿ ಮುಳುಗಿ ಅಸ್ವಸ್ಥವಾಗಿತ್ತು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗ ಮೂಲದ ಸೈಯದ್ ಹುಸೇನ್ ದಂಪತಿಗೆ ನಾಲ್ವರು ಮಕ್ಕಳು. ಈ ಪೈಕಿ ಮೃತ ಸಾಯಿದಾ ನಾಲ್ಕನೇ ಮಗು. ಗಾರೆ ಕೆಲಸ ಮಾಡುವ ಸೈಯದ್ ಕೆಲ ವರ್ಷಗಳಿಂದ ಕುಟುಂಬದ ಜತೆ ಬಾಗಲಗುಂಟೆಯಲ್ಲಿ ವಾಸವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News