Bengaluru | ‘ಬೊಹ್ರಾ’ ಸಮುದಾಯದೊಂದಿಗೆ ಸಿಎಂ ಚರ್ಚೆ
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ನೆಲೆಸಿರುವ ಮುಸ್ಲಿಮ್ ಸಮುದಾಯದ ಬೊಹ್ರಾ ಪಂಗಡದ ಕುರಿತು ಮುಖಂಡರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು.
ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೊಹ್ರಾ ಪಂಗಡದ ಶೇಖ್ ತಹೇರ್ ಭಾಯ್, ಹಾತಿಮ್ ಭಾಯ್ ಸಾಬ್, ಶೇಖ್ ಹುಝೀಫ್ ಭಾಯ್, ಶೇಖ್ ಅದ್ನಾನ್ ಭಾಯ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಈ ಕುರಿತು ಸ್ವಯಂ ಉದ್ಯೋಗ ಅವಕಾಶ ಹಾಗೂ ಶಿಕ್ಷಣ ಕುರಿತು ಚರ್ಚೆ ನಡೆಸಲಾಯಿತು.