ಬೆಂಗಳೂರು | ಬುದ್ಧಿವಾದ ಹೇಳಿದ್ದಕ್ಕೆ ತಂದೆಯ ಹತ್ಯೆಗೈದ ಪುತ್ರ
Update: 2025-04-20 18:07 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಬುದ್ಧಿವಾದ ಹೇಳಿದಕ್ಕೆ ತಂದೆಯನ್ನು ಮಗ ಹತ್ಯೆ ಮಾಡಿರುವ ಘಟನೆ ಇಲ್ಲಿನ ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ 2:30ರ ಸುಮಾರಿಗೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಇಸ್ಲಾಮ್ ಅರಬ್ (47) ಕೊಲೆಗೀಡಾದ ತಂದೆ ಎಂದು ಪೊಲೀಸರು ಗುರುತಿಸಿದ್ದಾರೆ.
ಇನ್ನೂ, ಕೃತ್ಯವೆಸಗಿರುವ ಆರೋಪದಡಿ ಪುತ್ರ ಬೋಲು ಅರಬ್‍ನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಸೈನಿಕರಾಗಿದ್ದ ಇಸ್ಲಾಮ್ ಅರಬ್, ಪುತ್ರನಿಗೆ ಶಿಸ್ತಿನಿಂದ ಇರುವಂತೆ ಬುದ್ಧಿವಾದ ಹೇಳಿದ್ದರು. ತಂದೆಯ ಕಠಿಣ ನಿಯಮಗಳನ್ನು ಸಹಿಸಲಾರದೆ ಹತ್ಯೆಗೈದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.