‘ಟೋಯಿಂಗ್’ ವ್ಯವಸ್ಥೆ ಮರು ಜಾರಿ; ಹಗಲು ದರೋಡೆಗೆ ಮುಂದಾದ ಸರಕಾರ : ಬಿಜೆಪಿ ಟೀಕೆ
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ‘ರಾಜಧಾನಿ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ, ರಸ್ತೆಗಳ ಅಭಿವೃದ್ಧಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವುದು ಬಿಟ್ಟು ಬಿಜೆಪಿ ಸರಕಾರ ತೆರವು ಮಾಡಿದ್ದ ಟೋಯಿಂಗ್ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಿ, ವಾಹನ ಸವಾರರಿಂದ ಹಗಲು ದರೋಡೆ ಮಾಡಲು ಮುಂದಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡರ ಬೆಂಗಳೂರಿಗೆ ಗ್ರೇಟರ್, ಬ್ರ್ಯಾಂಡ್ ಬೆಂಗಳೂರು ಎಂದು ಮರುನಾಮಕರಣ ಮಾಡಿದ್ದು ಕೇವಲ ಲೂಟಿ ಮಾಡಲು ಮಾತ್ರ ಎನ್ನುವುದು ಇದೀಗ ಸ್ಪಷ್ಟವಾಗಿದೆ’ ಎಂದು ಟೀಕಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ @DKShivakumar ಅವರು ಕೆಂಪೇಗೌಡರ ಬೆಂಗಳೂರಿಗೆ ಗ್ರೇಟರ್, ಬ್ರ್ಯಾಂಡ್ ಎಂದು ಮರುನಾಮಕರಣ ಮಾಡಿದ್ದು ಕೇವಲ ಲೂಟಿ ಮಾಡಲು ಮಾತ್ರ ಎನ್ನುವುದು ಇದೀಗ ಸ್ಪಷ್ಟವಾಗಿದೆ.
— BJP Karnataka (@BJP4Karnataka) May 26, 2025
ರಾಜಧಾನಿ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ, ರಸ್ತೆಗಳ ಅಭಿವೃದ್ಧಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಟ್ರಾಫಿಕ್ ಸಮಸ್ಯೆಗೆ… pic.twitter.com/5uhcoekd5g