×
Ad

ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು : ಕಾಂಗ್ರೆಸ್ ವ್ಯಂಗ್ಯ

Update: 2024-03-26 20:19 IST

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು ಎಂದು ಬಿಜೆಪಿ ಕಾರ್ಯಕರ್ತರೆ ಸರ್ಟಿಫಿಕೇಟ್ ನೀಡಿದ್ದಾರೆ. ಮುಂದೆ ಮತದಾರರು ಸರ್ಟಿಫಿಕೇಟ್ ಕೊಡಲಿದ್ದಾರೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಸ್ವಪಕ್ಷೀಯರೆ ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಅನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನೀ ಲಾಯಕ್ಕಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ವಿರುದ್ಧವೇ ಬೀದಿಗೆ ಇಳಿದಿದ್ದಾರೆ ಎಂದು ತಿಳಿಸಿದೆ.

ಆತ್ಮೀಯ ರಾಜ್ಯ ಬಿಜೆಪಿ, ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು, ಬಿಜೆಪಿ ಆಡಳಿತಕ್ಕೆ ಲಾಯಕ್ಕಿಲ್ಲದ ಪಕ್ಷ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಲಾಯಕ್ಕಿಲ್ಲದ ಮನುಷ್ಯ. ಇದು ನಾಡಿನ ಜನತೆಗೆ ಅರ್ಥವಾಗಿರುವ ಸತ್ಯ ಎಂದು ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News