ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ವಿಭಾಗ 8ರಿಂದ 11ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 3 ಹೊಸದಾಗಿ ಡಿಸಿಪಿ ವಿಭಾಗಗಳನ್ನು ರಚಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಡಿಸಿಪಿ ವಿಭಾಗಗಳ ಸಂಖ್ಯೆ 8ರಿಂದ 11ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಡಿಸಿಪಿ ವಾಯುವ್ಯ ವಿಭಾಗ, ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ ದೇವನಹಳ್ಳಿ ವಿಭಾಗ ಸೃಜಿಸಲಾಗಿದೆ. ಈ ಹಿಂದೆ ಇದ್ದ ಆಗ್ನೇಯ ವಿಭಾಗವನ್ನು ವಿಭಜಿಸಿ ಹೊಸದಾಗಿ ಎಲೆಕ್ಟ್ರಾನಿಕ್ ಸಿಟಿ ವಿಭಾಗ ಎಂದು ಹೆಸರಿಸಲಾಗಿದೆ. ಈಶಾನ್ಯ ವಿಭಾಗವನ್ನು ವಿಭಜಿಸಿ ದೇವನಹಳ್ಳಿ ವಿಭಾಗ ಎಂದು ಹೆಸರಿಸಲಾಗಿದೆ.
ಉಳಿದಂತೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ, ವೈಟ್‍ಫೀಲ್ಡ್ ವಿಭಾಗಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆದರೆ, ಕೆಲ ಠಾಣೆಗಳನ್ನು ವಿಭಾಗವಾರು ಮರು ಹಂಚಿಕೆ ಮಾಡಲಾಗಿದೆ.
ಡಿಸಿಪಿ ವಿಭಾಗಗಳ ವಿವರ:
1. ಎಲೆಕ್ಟ್ರಾನಿಕ್ ಸಿಟಿ ವಿಭಾಗ: ಮಡಿವಾಳ ಎಸಿಪಿ ಉಪವಿಭಾಗ - ಕೋರಮಂಗಲ, ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಆಡುಗೋಡಿ, ತಿಲಕನಗರ, ಸುದ್ದುಗುಂಟೆಪಾಳ್ಯ.
ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ - ಎಲೆಕ್ಟ್ರಾನಿಕ್ ಸಿಟಿ, ಬಂಡೆಪಾಳ್ಯ, ಪರಪ್ಪನ ಅಗ್ರಹಾರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ಮಹಿಳಾ ಠಾಣೆ ಹಾಗೂ ಸಿಇಎನ್ ಠಾಣೆ.
2. ದೇವನಹಳ್ಳಿ ವಿಭಾಗ: ಸಂಪಿಗೆಹಳ್ಳಿ ಉಪವಿಭಾಗ - ಸಂಪಿಗೆಹಳ್ಳಿ, ಅಮೃತಹಳ್ಳಿ, ಕೊತ್ತನೂರು, ಹೆಣ್ಣೂರು, ಬಾಗಲೂರು.
ಯಲಹಂಕ ಉಪವಿಭಾಗ - ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ.
ದೇವನಹಳ್ಳಿ ಉಪವಿಭಾಗ - ದೇವನಹಳ್ಳಿ, ಚಿಕ್ಕಜಾಲ, ಮಹಿಳಾ ಠಾಣೆ, ಸಿಇಎನ್ ಠಾಣೆ.
3. ಪೂರ್ವ ವಿಭಾಗ: ಪುಲಕೇಶಿನಗರ ಉಪವಿಭಾಗ - ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಕೇಶಿನಗರ, ಭಾರತೀನಗರ.
ಹಲಸೂರು ಉಪವಿಭಾಗ - ಹಲಸೂರು, ಇಂದಿರಾನಗರ, ಜೀವನಭೀಮಾನಗರ, ಬೈಯ್ಯಪ್ಪನಹಳ್ಳಿ
ಬಾಣಸವಾಡಿ ಉಪವಿಭಾಗ - ರಾಮಮೂರ್ತಿ ನಗರ, ಬಾಣಸವಾಡಿ, ಮಹಿಳಾ ಠಾಣೆ, ಸಿಇಎನ್ ಠಾಣೆ.
4. ಪಶ್ಚಿಮ ವಿಭಾಗ: ಚಿಕ್ಕಪೇಟೆ ಉಪ ವಿಭಾಗ - ಉಪ್ಪಾರಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಚಾಮರಾಜಪೇಟೆ, ಕಾಟನ್‍ಪೇಟೆ.
ಬ್ಯಾಟರಾಯನಪುರ ಉಪ ವಿಭಾಗ - ಚಂದ್ರಾಲೇಔಟ್, ಜೆ.ಜೆ.ನಗರ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ.
ವಿಜಯನಗರ ಉಪ ವಿಭಾಗ - ಗೋವಿಂದರಾಜನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಮಾಗಡಿ, ಕೆ.ಪಿ.ಅಗ್ರಹಾರ, ಮಹಿಳಾ ಠಾಣೆ, ಸಿಇಎನ್ ಠಾಣೆ
5. ಉತ್ತರ ವಿಭಾಗ: ಯಶವಂತಪುರ ಉಪ ವಿಭಾಗ - ಯಶವಂತಪುರ, ಆರ್ ಎಂಸಿ ಯಾರ್ಡ್, ಸೋಲದೇವನಹಳ್ಳಿ, ಗಂಗಮ್ಮನಗುಡಿ, ಜಾಲಹಳ್ಳಿ.
ಮಲ್ಲೇಶ್ವರ ಉಪ ವಿಭಾಗ - ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ರಾಜಗೋಪಾಲನಗರ, ಸುಬ್ರಹ್ಮಣ್ಯ ನಗರ, ಶ್ರೀರಾಮಪುರ, ಮಹಿಳಾ ಠಾಣೆ, ಸಿಇಎನ್ ಠಾಣೆ.
6. ದಕ್ಷಿಣ ವಿಭಾಗ: ಜಯನಗರ ಉಪವಿಭಾಗ - ಜಯನಗರ, ಜೆ.ಪಿ.ನಗರ, ಬನಶಂಕರಿ, ಬಸವನಗುಡಿ, ಸಿದ್ಧಾಪುರ.
ವಿ.ವಿ.ಪುರ ಉಪವಿಭಾಗ - ವಿ.ವಿ.ಪುರ, ಶಂಕರಪುರ, ಕೆ.ಜಿ.ನಗರ, ಹನುಮಂತನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಗಿರಿನಗರ, ಮಹಿಳಾ ಠಾಣೆ, ಸಿಇಎನ್ ಠಾಣೆ.
7. ಕೇಂದ್ರ ವಿಭಾಗ: ಹಲಸೂರು ಗೇಟ್ ಉಪ ವಿಭಾಗ - ಹಲಸೂರು ಗೇಟ್, ಎಸ್.ಜೆ.ಪಾರ್ಕ್, ಎಸ್.ಆರ್.ನಗರ, ವಿಲ್ಸನ್ ಗಾರ್ಡನ್.
ಶೇಷಾದ್ರಿಪುರ ಉಪ ವಿಭಾಗ - ಶೇಷಾದ್ರಿಪುರ, ಹೈಗ್ರೌಂಡ್ಸ್, ಸದಾಶಿವನಗರ, ವೈಯಾಲಿಕಾವಲ್.
ಕಬ್ಬನ್ ಪಾರ್ಕ್ ಉಪ ವಿಭಾಗ - ಕಬ್ಬನ್ ಪಾರ್ಕ್, ಅಶೋಕನಗರ, ವಿವೇಕನಗರ, ವಿಧಾನಸೌಧ, ಮಹಿಳಾ ಠಾಣೆ, ಸಿಇಎನ್ ಠಾಣೆ.
8.ವೈಟ್‍ಫೀಲ್ಡ್ ವಿಭಾಗ: ವೈಟ್ ಫೀಲ್ಡ್ ಉಪ ವಿಭಾಗ - ವೈಟ್‍ಫೀಲ್ಡ್, ಕೆ.ಆರ್.ಪುರ, ಮಹದೇವಪುರ, ಕಾಡುಗೋಡಿ, ಆವಲಹಳ್ಳಿ.
ಮಾರತ್ತಹಳ್ಳಿ ಉಪವಿಭಾಗ - ಮಾರತ್ತಹಳ್ಳಿ, ಎಚ್‍ಎಎಲ್, ಬೆಳ್ಳಂದೂರು, ವರ್ತೂರು, ಮಹಿಳಾ ಠಾಣೆ, ಸಿಇಎನ್ ಠಾಣೆ.
9.ವಾಯುವ್ಯ ವಿಭಾಗ: ಪೀಣ್ಯ ಉಪವಿಭಾಗ - ಪೀಣ್ಯ, ಬಾಗಲಗುಂಟೆ, ರಾಜಗೋಪಾಲನಗರ, ಬ್ಯಾಡರಹಳ್ಳಿ.
ಕೆಂಗೇರಿ ಉಪ ವಿಭಾಗ - ಕೆಂಗೇರಿ, ಅನ್ನಪೂರ್ಣೇಶ್ವರಿ ನಗರ, ಕುಂಬಳಗೋಡು, ಜ್ಞಾನಭಾರತಿ.
10.ಆಗ್ನೇಯ ವಿಭಾಗ: ಸುಬ್ರಹ್ಮಣ್ಯಪುರ ಉಪವಿಭಾಗ- ತಲಘಟ್ಟಪುರ, ಸುಬ್ರಹ್ಮಣ್ಯಪುರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್.
ಮೈಕೋ ಲೇಔಟ್ ಉಪವಿಭಾಗ - ಹುಳಿಮಾವು, ಮೈಕೋ ಲೇಔಟ್, ಬೇಗೂರು, ಪುಟ್ಟೇನಹಳ್ಳಿ.
11. ಈಶಾನ್ಯ ವಿಭಾಗ: ಕೆ.ಜಿ.ಹಳ್ಳಿ ಉಪವಿಭಾಗ- ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ
ಜೆ.ಸಿ.ನಗರ ಉಪವಿಭಾಗ- ಆರ್.ಟಿ.ನಗರ, ಜೆ.ಸಿ.ನಗರ, ಸಂಜಯನಗರ, ಹೆಬ್ಬಾಳ.